Published On: Tue, Aug 21st, 2018

“ಮೈಸೂರು ಮಸಾಲಾ” ಚಿತ್ರದ ಪೋಸ್ಟರ್ ಬಿಡುಗಡೆ

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಕಿರು ಚಿತ್ರ ಉತ್ಸವದಲ್ಲಿ (ಬಿಐಎಸ್ಎಫ್ಎಫ್) ಹೊಸದಾಗಿ ಆರಂಭಗೊಂಡಿರುವ ಚಿತ್ರ ನಿರ್ಮಾಣ ಸಂಸ್ಥೆ ಅಜಯ್ ಸರ್ಪೇಷ್ಕರ್ ಫಿಲಮ್ಸ್ನ “ಮೈಸೂರು ಮಸಾಲಾ” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಪೋಸ್ಟರ್ ಬಿಡುಗಡೆಯ ನಂತರ ಚಿತ್ರದ ನಿರ್ದೇಶಕ ಅಜಯ್ ಸರ್ಪೇಷ್ಕರ್ ಅವರೊಂದಿಗೆ ಮೈಸೂರು ಮಸಾಲ ಚಿತ್ರದ ಕುರಿತ ಸಂವಾದ ಏರ್ಪಡಿಸಲಾಗಿತ್ತು. “ಮೈಸೂರುಮಸಾಲ”ದಂತಹ ಭಾರತದ ಶ್ರೀಮಂತ ಪರಂಪರೆಯಿಂದ ಪ್ರಭಾವಿತವಾದ ಸೈ-ಫೈ ಚಿತ್ರದ ಕುರಿತು ಚರ್ಚೆ ನಡೆಸಲಾಯಿತು. ಚಿತ್ರ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ.

_DSC8346 (1)
“ಮೈಸೂರು ಮಸಾಲ ಸೈಫೈ ಸಾಹಸಮಯ ಚಿತ್ರವಾಗಿರುವುದರಿಂದ ಇದರಲ್ಲಿ ಸಾಕಷ್ಟು ವಿಎಫ್ಎಕ್ಸ್ ಹಾಗೂ ಎಸ್ಎಫ್ಎಕ್ಸ್ ಅಂಶಗಳನ್ನು ಅಳವಡಿಸಲಾಗಿದೆ. ಇತ್ತೀಚೆಗಷ್ಟೇ ನಾವು ಚಿತ್ರೀಕರಣಪೂರ್ಣಗೊಳಿಸಿದ್ದು, ನಿರ್ಮಾಣದ ನಂತರ ಕೆಲಸಗಳು ಆರಂಭಗೊಂಡಿವೆ. ಮೈಸೂರು ಮಸಾಲ ಸ್ಯಾಂಡಲ್ವುಡ್ನಲ್ಲಿ ಹೊಸ ಯುಗವನ್ನು ಆರಂಭಿಸಲಿದೆ ” ಎಂದು ಅಜಯ್ ತಿಳಿಸಿದರು.
ಚಿತ್ರದಲ್ಲಿ ಹಿರಿಯ ರಂಗಕರ್ಮಿ ಹಾಗೂ ನಟ ಅನಂತನಾಗ್ ಅವರು, ವಿಜ್ಞಾನದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಸಾಕಷ್ಟು ಅನುಭವವಿರುವ ನಿವೃತ್ತ ಪತ್ರಕರ್ತನ ಪಾತ್ರ ನಿರ್ವಹಿಸಲಿದ್ದಾರೆ.ಚಿತ್ರದಲ್ಲಿ ಹಿರಿಯ ಪತ್ರಕರ್ತ ಹಾಗೂ ರಂಗಕರ್ಮಿ ಹಾಗೂ ಹಲವು ಸೈ-ಫೈ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಪ್ರಕಾಶ್ ಬೆಳವಾಡಿ ಅವರು ನಟಿಸಲಿದ್ದಾರೆ.
ಚಿತ್ರದ ಇತರ ಪಾತ್ರವನ್ನು ಗೌಪ್ಯವಾಗಿಡಲಾಗಿದೆ. ಆದರೆ, ಅಜಯ್ ಸರ್ಪೇಷ್ಕರ್ ಅವರು ಮೈಸೂರು ಮಸಾಲ ಚಿತ್ರ ಅನ್ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ (ಯುಎಫ್ಒ)ಗಳನ್ನುಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿಸ್ಯಾಂಡಲ್ವುಡ್ನ ಖ್ಯಾತನಾಮರಾದ ನಟ ಅನಂತನಾಗ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಹಾಗೂ ಕಿರಣ್ ಶ್ರೀನಿವಾಸ್ ಉಪಸ್ಥಿತರಿದ್ದರು.

ಅಜಯ್ ಸರ್ಪೇಷ್ಕರ್ ಚಿತ್ರದ ಬಗ್ಗೆ

ಚಿತ್ರಗಳು ನಿರ್ದೇಶಕರ ಸಂವೇದನೆ ಮಾತ್ರವಲ್ಲ, ಅದನ್ನು ವೀಕ್ಷಿಸುವ ಸಮಾಜದ ಸಂವೇದನೆಯನ್ನೂ ಒಳಗೊಂಡಿರುತ್ತದೆ. ಜನರು ತಮ್ಮ ಸಂವೇದನೆ ಹಾಗೂ ಅಭಿರುಚಿಯನ್ನುಗೌರವಿಸುವ ಉತ್ತಮ ಚಿತ್ರಗಳಿಗಾಗಿ ಮೌನವಾಗಿ ಪ್ರತಿಭಟಿಸುತ್ತಿರುವುದನ್ನು ನಾವು ಅರಿತಿದ್ದೇವೆ. ಕನ್ನಡ ಚಿತ್ರರಂಗವನ್ನು ಉತ್ತಮಗೊಳಿಸಿ, ಭಾರತ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಅದನ್ನು ಯಶಸ್ವಿಯಾಗಿ ಪ್ರಚುರಪಡಿಸುವ ಗುರಿ ನಮ್ಮದಾಗಿದೆ. ಉತ್ತಮ ಚಿತ್ರಗಳನ್ನು ಪ್ರೀತಿಯಿಂದ ತಯಾರಿಸಿ, ಚಿತ್ರಗಳಿಂದ ದೂರ ಸರಿಯುತ್ತಿರುವ ಜನರ ಆಸಕ್ತಿಯನ್ನು ಮತ್ತೊಮ್ಮೆ ಚಿತ್ರರಂಗದತ್ತ ಸೆಳೆಯುವ ನಿಟ್ಟಿನಲ್ಲಿ ಮೈಸೂರು ಮಸಾಲ ಮೊದಲಪ್ರಯತ್ನವಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter