Published On: Sun, Aug 19th, 2018

ಫುಟ್‍ಬಾಲ್‍ಗಿಂತ ವೇಗವಾಗಿ ಕ್ರೀಡಾಪಟುಗಳು ಓಡಬೇಕು : ಶಾಸಕ ಉಮಾನಾಥ ಕೋಟ್ಯಾನ್

ಮೂಡುಬಿದಿರೆ : ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಪೂರ್ತಿಬೇಕು. ಯಾವುದೇ ಪಂದ್ಯಾಟಗಳಲ್ಲಿ ಸೋಲು ಗೆಲುವು ಅನಿವಾರ್ಯ ಆದರೆ ಕೊನೆ ಗಳಿಗೆವರೆಗೂ ಸೆಣಸಾಡುವಂತಹ ಗುಣವನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು. ಫುಟ್‍ಬಾಲ್ ಎಂದರೆ ವೇಗವಾಗಿ ಓಡುವ ಆಟ ಆದ್ದರಿಂದ ಫುಟ್‍ಬಾಲ್‍ಗಿಂತ ವೇಗವಾಗಿ ಕ್ರೀಡಾಪಟುಗಳು ಓಡುವ ಮೂಲಕ ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ತೋರಬೇಕು ಎಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

football 1

ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮೂಡುಬಿದಿರೆ ಮತ್ತು ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ ಬೆಳುವಾಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ 2018-19ನೇ ಸಾಲಿನ ಮೂಡುಬಿದಿರೆ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪೌಢಶಾಲಾ ವಿಭಾಗದ ಫುಟ್‍ಬಾಲ್ ಪಂದ್ಯಾಟದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಮೂಡುಬಿದಿರೆಯಲ್ಲಿ ಆಳ್ವಾಸ್ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ತಾನು ಕೂಡಾ ಒಬ್ಬ ಫುಟ್‍ಬಾಲ್ ಆಟಗಾರನಾಗಿದ್ದೆ ಎಂದು ಸ್ಮರಿಸಿಕೊಂಡ ಅವರು ತನ್ನ ನೆಲೆಯಿಂದ ಆಗುವಷ್ಟು ಕ್ರೀಡಾಪಟುಗಳಿಗೆ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದರು.

foot ball

ಶಾಲೆಯ ಸ್ಥಾಪಕ ಜೆ.ಎಂ ಪಡುಬಿದ್ರಿ ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಮೈದಾನವು ಶತಮಾನದ ಚರಿತ್ರೆಯನ್ನು ಹೊಂದಿದ್ದು ನಿರ್ಗತಿಕವಾಗಿ ಬಿದ್ದಿದೆ. ಇಲ್ಲಿ ನಾಲ್ಕು ಎಕರೆ ಒಂದು ಸೆಂಟ್ಸ್ ಜಾಗವಿದ್ದು ಇದಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಪುರಸ್ಕಾರ :
ಫುಟ್‍ಬಾಲ್ ಪಂದ್ಯಾಟದಲ್ಲಿ ಕಳೆದ ಸಾಲಿನಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಶಾಲೆಯ ಕ್ರೀಡಾಪಟುಗಳಾದ ಕಾವ್ಯಾ, ವೀಕ್ಷಿತಾ ಹಾಗೂ ಮನೀಶಾ ಅವರನ್ನು ಪುರಸ್ಕರಿಸಲಾಯಿತು.
ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ಆಚಾರ್ಯ, sÁರತ್ ಆಟೋಕಾರ್ಸ್‍ನ ಶಿವಕೀರ್ತಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೆ.ಪ್ರಭಾಕರ ಶೆಟ್ಟಿ, ವಾಲ್ಪಾಡಿಗುತ್ತು ಗುಣಪಾಲ ಮುದ್ಯ, ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ಶೆಟ್ಟಿ ಎಸ್, ಶಾಲಾ ಆಡಳಿತ ಮಂಡಳಿ ಸದಸ್ಯ ಸುರೇಶ್ ಪೂಜಾರಿ ಗೋಲಾರ, ಸಿಆರ್‍ಪಿ ಪ್ರಸನ್ನ ಶೆಣೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕ ದೇವದಾಸ ಕಿಣಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಲೇರಿಯನ್ ಮೊಂಟೆರೋ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ವಂದಿಸಿದರು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter