Published On: Thu, Aug 16th, 2018

ಮೇರಾ ಭಾರತ್ ಮಹಾನ್

ಈ ಭಾರತ ದೇಶವನ್ನು ಹೊಗಳಲಿಕ್ಕೆ ಸಾಧ್ಯವಿಲ್ಲವಾದರೆ ದಯವಿಟ್ಟು ತೆಗಳಬೇಡಿ. ಭಾರತದ ಹಿರಿಮೆ ಅಪಾರವಾದುದು, ಅನಂತವಾದುದು, ಪ್ರಾಚೀನವಾದುದು, ಅನನ್ಯವಾದುದು. ಇಂಥ ದೇಶದ ಬಗ್ಗೆ ನಿಮ್ಮ ಅಸಮರ್ಪಕ ಅಭಿಪ್ರಾಯವನ್ನು ಪ್ರಕಟಿಸುವ ಬದಲು ಒಮ್ಮೆ ವಿದ್ಯುನ್ಮಾನ ಅಂಚೆಯಿಂದ ಬಂದ ಭಾರತದ ಹಿರಿಮೆಯನ್ನು ಸಾರುವ ಈ ಚಿಕ್ಕ ಮಾಹಿತಿಯನ್ನು ನೋಡಿ.
• ಸುಮಾರು 3.22 ಮಿಲಿಯನ್ ಭಾರತೀಯರು ಇಂದು ಅಮೇರಿಕಾದಲ್ಲಿದ್ದಾರೆ.
• ಅಮೇರಿಕಾದಲ್ಲಿರುವ ವೈದ್ಯರುಗಳ ಪೈಕಿ ಶೇ.38 ರಷ್ಟು ವೈದ್ಯರು ಭಾರತೀಯರಾಗಿದ್ದಾರೆ.
• ಅಮೇರಿಕಾದಲ್ಲಿರುವ ವಿಜ್ಞಾನಿಗಳಲ್ಲಿ ಶೇ.12 ರಷ್ಟು ವಿಜ್ಞಾನಿಗಳು ಭಾರತೀಯರಾಗಿದ್ದಾರೆ.
• ಅಮೇರಿಕಾದ ನಾಸಾ ಅಂತರಿಕ್ಷ ಸಂಶೋಧನಾ ಸಂಸ್ಥೆಯ ಉದ್ಯೋಗಿಗಳಲ್ಲಿ ಶೇ.36 ರಷ್ಟು ಭಾರತೀಯರಾಗಿದ್ದಾರೆ.
• ಅಮೇರಿಕಾದ ಮೈಕ್ರೋಸಾಫ್ಟ್ ಕಂಪೆನಿಯ ಉದ್ಯೋಗಿಗಳಲ್ಲಿ ಶೇ.34 ರಷ್ಟು ಭಾರತೀಯರಾಗಿದ್ದಾರೆ.
• ಐ.ಬಿ.ಎಂ. ಕಂಪೆನಿಯ ಉದ್ಯೋಗಿಗಳಲ್ಲಿ ಶೇ.28 ರಷ್ಟು ಜನ ಭಾರತೀಯರಾಗಿದ್ದಾರೆ.
• ಇಂಟೆಲ್ ಕಂಪೆನಿಯ ಉದ್ಯೋಗಿಗಳಲ್ಲಿ ಶೇ.17 ರಷ್ಟು ಜನ ಭಾರತೀಯರಾಗಿದ್ದಾರೆ.
• ಇತ್ತೀಚೆಗೆ ಜರ್ಮನ್ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ಇತಿಹಾಸದ ಅಂಕಿ ಅಂಶಗಳಲ್ಲಿ ಭಾರತದ ಹಿರಿಮೆ ಸಾರುವ ಈ ಕೆಲವು ಅಂಶಗಳೂ ಸೇರಿವೆ.
• ಕಳೆದ 10,000 ವರ್ಷಗಳ ಇತಿಹಾಸದಲ್ಲಿ ಭಾರತವು ಎಂದಿಗೂ ತನ್ನ ನೆರೆಯ ದೇಶಗಳ ಮೇಲೆ ದಂಡೆತ್ತಿ ಹೋಗಿಲ್ಲ.
• ಭಾರತವು ದಶಮಾನ ಪದ್ಧತಿಯನ್ನು ಆವಿಷ್ಕರಿಸಿ ಜಗತ್ತಿಗೆ ನೀಡಿತು.
• ಕ್ರಿ.ಪೂ.700 ರ ಹೊತ್ತಿಗೆ ಜಗತ್ತಿನ ಮೊಟ್ಟ ಮೊದಲ ವಿಶ್ವವಿದ್ಯಾಲಯ ಭಾರತದ ತಕ್ಷಶಿಲೆ ಆರಂಭವಾಗಿತ್ತು. ಪ್ರಪಂಚದ ವಿವಿಧ ದೇಶÀಗಳಿಂದ ಬಂದ ಸುಮಾರು 10,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ 60 ಕ್ಕೂ ಹೆಚ್ಚು ವಿಷಯಗಳನ್ನು ಆಯ್ದುಕೊಂಡು ಅಭ್ಯಾಸ ನಡೆಸುತ್ತಿದ್ದರು. ಕ್ರಿ.ಪೂ. 4 ನೇ ಶತಮಾನದಲ್ಲಿ ಆರಂಭವಾದ ನಲಂದಾ ವಿಶ್ವವಿದ್ಯಾಲಯವು ಶಿಕ್ಷಣ ಕ್ಷೇತ್ರಕ್ಕೆ ಭಾರತವು ನೀಡಿದ ಅತ್ಯುತ್ತಮ ಕೊಡುಗೆ ಎಂದು ಪರಿಗಣಿಸಲಾಗಿದೆ.
• ಇಂಡೋ – ಯುರೋಪಿಯನ್ ಭಾಷಾ ಕುಟುಂಬಕ್ಕೆ ಸಂಸ್ಕøತವು ಮಾತೃ ಸ್ಥಾನದಲ್ಲಿದೆ. 1987 ರಲ್ಲಿ ಪ್ರೊಬ್ರ್ಸ್ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ವರದಿಯಂತೆ ಸಂಸ್ಕøತವು ಕಂಪ್ಯೂಟರ್‍ಗಳಿಗೆ ಹೇಳಿ ಮಆಡಿಸಿದಂತಿದೆ.
• ಮನುಕುಲಕ್ಕೆ ಪರಿಚಿತವಾದ ಔಷದ ಪದ್ಧತಿಗಳಲ್ಲಿ ಆಯುರ್ವೇದವೇ ಅತ್ಯಂತ ಪುರಾತನವಾದದ್ದು. ಭಾರತೀಯ ವೈದ್ಯ ಪದ್ಧತಿಯ ಪಿತಾಮಹನೆಂದು ಪರಿಗಣಿಸಲಾಗಿರುವ ಚರಕ ಮಹಾವೈದ್ಯನು 2500 ವರ್ಷಗಳ ಹಿಂದೆಯೇ ಔಷದ ಸಂಹಿತೆ ಒಂದನ್ನು ಸಂಕಲಿಸಿದ್ದನು. ಒಂದು ಆಯುರ್ವೇದವು ಶೀಘ್ರಗತಿಯಲ್ಲಿ ಮರಹುಟ್ಟು ಪಡೆದುಕೊಳ್ಳುತ್ತಿರುವುದು ನವ ನಾಗರೀಕತೆಯಲ್ಲಿ ಬಾರತೀಯ ವೈದ್ಯ ಪದ್ದತಿಗೆ ಇರುವ ಮಹತ್ವವನ್ನು ತಿಳಿಸುತ್ತದೆ.
• ಇಂದು ಭಾರತವು ಬಡ ರಾಷ್ಟ್ರವಾಗಿ ಅಭಿವೃದ್ದಿ ಹೊದುತ್ತಿರುವ ದೇಶವಾಗಿ ಬಿಂಬಿತವಾಗುತ್ತಿದ್ದರೂ 17 ನೇ ಶತಮಾನದಲ್ಲಿ ಬ್ರಿಟಿಷರು ಭಾರತಕ್ಕೆ ಬಂದು ಕೊಳ್ಳೆ ಹೊಡೆಯುವವರೆಗೆ ಪ್ರಪಂಚದ ಅತ್ಯಂತ ಸಂಪದ್ಭರಿತ ರಾಷ್ಟ್ರವಾಗಿ ಮೆರೆದಿತ್ತು.
• ಸುಮಾರು 6000 ವರ್ಷಗಳ ಹಿಂದೆಯೇ ಸಿಂಧೂ ನದಿಯಲ್ಲಿ ನೌಕಾಯಾನ ಆರಂಭವಾಗಿತ್ತು. ನೌಕಾಯಾನ ಎನ್ನುವ ಪದ ಸಂಸ್ಕøತದ ನೌಗತಿ: ಎಂಬ ಪದದಿಂದ ಬಂದಿದೆ.
• ಭೂಮಿಯು ಸೂರ್ಯನ ಸುತ್ತಲೂ ತಿರುಗಲು ತೆಗೆದುಕೊಳ್ಳುವ ಕಾಲವನ್ನು ಲೆಕ್ಕ ಹಾಕಿ ಪಾಶ್ಚಾತ್ಯ ಖಗೋಳಜ್ಞ ಸ್ಟಾರ್ಟ್ ತಿಳಿಸುವುದಕ್ಕೆ ನೂರಾರು ವರ್ಷ ಮೊದಲೇ ಕ್ರಿ.ಶ. 5ನೇ ಶತಮಾನದಲ್ಲಿ ಭಾಸ್ಕರಾಚಾರ್ಯನು ಕರಾರುವಕ್ಕಾಗಿ ಸೂರ್ಯನ ಪರಿಭ್ರಮಣಕ್ಕೆ ಬೇಕಾದ ಕಾಲ 365.258 76484 ದಿನಗಳು ಎಂದು ಲೆಕ್ಕ ಮಾಡಿ ಹೇಳಿದ್ದನು.
• W್ರಭುಜಗಳಿಗೆ ಸಂಬಂಧಿಸಿದಂತೆ ಪ್ರಚಲಿತವಿರುವ ಪೈಥಾಗೋರಸ್ ಪ್ರಮೇಯವನ್ನು ಪೈಥಾಗೊರಸನು ನಿರೂಪಿಸುವುದಕ್ಕೂ ನೂರಾರು ವರ್ಷ ಪೂರ್ವದಲ್ಲಿ ಕ್ರಿ.ಪೂ.6 ನೇ ಶತಮಾನದಲ್ಲಿ ಭೋದಾಯನನೆಂಬ ಗಣಿತಜ್ಞನು ಅದನ್ನು ನಿರೂಪಿಸಿದ್ದನು. ಹಾಗೆಯೇ ಪೈ ನ ಉತ್ತರವನ್ನು ಲೆಕ್ಕ ಹಾಕಿದ್ದನು.
• ಅಮೇರಿಕಾದ ಭೂಗರ್ಭ ಸಂಸ್ಥೆಯ ಅಂದಾಜಿನಂತೆ 1896 ರ ವರೆಗೆ ವಿಶ್ವದಲ್ಲಿ ವಜ್ರಗಳನ್ನು ಸರಬರಾಜು ಮಾಡುತ್ತಿದ್ದ ಏಕೈಕ ದೇಶ ಭಾರತವಾಗಿತ್ತು.
• ಅಮೇರಿಕಾ ಮೂಲದ ಐ.ಇ.ಇ.ಇ ಸಂಸ್ಥೆಯ ಹೇಳಿಕೆಯಂತೆ ವಿಶ್ವದ ವೈರ್ ಲೆಸ್ ಕಮ್ಯುನಿಕೇಶನ್ಸ್ ದಲ್ಲಿ ಮಾರ್ಕೊನಿಗಿಂತಲೂ ಮೊದಲೇ ಪ್ರೊ.ಜಗದೀಶ್ ಚಂದ್ರ ಬೋಸ್ ಅವರು ಅಗ್ರಗಣ್ಯರಾಗಿದ್ದರು.
• ವಿಶ್ವದ ಪುರಾತನ ಅಣೆಕಟ್ಟು ಮತ್ತು ವ್ಯವಸಾಯದ ಉದ್ದೇಶ ಹೊಂದಿದ್ದ ನೀರಿನ ಸಂಗ್ರಹವು ಗುಜರಾತಿನ ಸೌರಾಷ್ಟ್ರದಲ್ಲಿ ನಿರ್ಮಿಸಲಾಗಿತ್ತು.
• ಕ್ರಿ.ಪೂ. 150 ರಲ್ಲಿ ಬದುಕಿದ್ದ ಶಕ ರಾಜವಂಶದ ದೊರೆ ಮೊದನೆ ರುದ್ರದಮನ ಎಂಬುವನ ಪ್ರಕಾರ ಚಂದ್ರಗುಪ್ತ ಮೌರ್ಯನ ಕಾಲದಲ್ಲಿಯೇ ರೈವತಕ ಪರ್ವತಗಳ ಮೇಲೆ ಸುದರ್ಶನ ಎಂಬ ಸುಂದರ ಸರೋವರವನ್ನು ನಿರ್ಮಿಸಿದ್ದನು.
• ಚೆಸ್/ಚದುರಂಗ/ಅಷ್ಟಪಾದ/ಶತರಂಜ್ ಆಟವು ಭಾರತದಲ್ಲಿ ಹುಟ್ಟಿ ಬೆಳೆಯಿತು.
• 5000 ವರ್ಷಗಳ ಹಿಂದೆ ಪ್ರಪಂಚದ ಬಹಳಷ್ಟು ಭಾಗಗಳಲ್ಲಿ ಜನ ಅಲೆಮಾರಿಗಳಾಗಿ ಕಾಡುಮೇಡುಗಳಲ್ಲಿ ಅಲೆಯುತ್ತಿದ್ದ ಸಂಧರ್ಭದಲ್ಲಿ ಭಾರತೀಯರುಉ ಸಿಂಧೂ ಬಯಲಲ್ಲಿ ಹರಪ್ಪ ಸಂಸ್ಕøತಿಯನ್ನು , ನಾಗರೀಕ ಜೀವನವನ್ನು ಆರಂಭಿಸಿದ್ದರು.
• ಸ್ಥಳದ ದರ ನಿಗದಿ ಮತ್ತು ದಶಮಾನ ಪದ್ಧತಿಗಳು ಕ್ರಿ.ಪೂ.100 ಕ್ಕೂ ಮೊದಲೇ ಭಾರತದಲ್ಲಿ ಪ್ರಚಲಿತವಿದ್ದವು. ಭಾರತದ ಬಗ್ಗೆ ವಿಶ್ವದ ಗಣ್ಯರು ಹೇಳಿರುವ ನುಡಿಮುತ್ತುಗಳು.
• ಎಣಿಕೆಯನ್ನು ಕಲಿಸಿಕೊಟ್ಟ ಭಾರತೀಯರಿಗೆ ನಾವು ಚಿರಋಣಿಗಳಾಗಿದ್ದೇವೆ. ಎಣಿಕೆ ಗೊತ್ತಿಲ್ಲದಿದ್ದರೆ ಅದ್ಭುತವೆನಿಸುವ ಯಾವ ವೈಜ್ಞಾನಿಕ ಸಾಧನೆಯೂ ಸಾಧ್ಯವಾಗುತ್ತಿರಲೇ ಇಲ್ಲ.-ಆಲ್ಬರ್ಟ್ ಐನ್ ಸ್ಟೈನ್.
• “ಭಾರತವು ಮಾನವ ಕುಲದ ತೊಟ್ಟಿಲು , ಮಾನವ ಬಾಷೆಯ ಉಗಮಸ್ಥಾನ, ಇತಿಹಾಸದ ಮಾತೆ ಪುರಾಣದ ಮಾತಾಮಹಿ ಮತ್ತು ಸಂಸ್ಕøತಿ ಮತ್ತು ಆಚರಣೆಗಳ ಮುತ್ತಜ್ಜಿ. ನಮ್ಮ ಅತ್ಯುತ್ತಮ ಹಾಗೂ ಅಮೂಲ್ಯವಾದ ರಚನಾತ್ಮಕ ಸಾಮಾಗ್ರಿಗಳೆಲ್ಲವೂ ಭಾರತದಲ್ಲಿ ಸಂರಕ್ಷಿಸಲ್ಪಟ್ಟಿವೆ.-ಮಾರ್ಕ್ ಟ್ವೇನ್.”

FC7_8908

 

 

ರಾಘವೇಂದ್ರ ಪ್ರಭು , ಕರ್ವಾಲು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter