Published On: Sat, Aug 11th, 2018

ಕೃಷಿ ಖುಷಿ ಮತ್ತು ವಮಹೋತ್ಸವ ಕಾರ್ಯಕ್ರಮ

ಮೂಡುಬಿದಿರೆ: ಎಂಸಿಎಸ್ ಬ್ಯಾಂಕ್ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರ ಇವುಗಳ ಆಶ್ರಯದಲ್ಲಿ ಮೂಡುಬಿದಿರೆ ಅರಣ್ಯ ಇಲಾಖೆ ಸಹಕಾರದೊಂದಿಗೆ ಎಂಸಿಎಸ್ ಬ್ಯಾಂಕ್‍ನಲ್ಲಿ ಕೃಷಿ ಖುಷಿ ಮತ್ತು ವಮಹೋತ್ಸವ ಕಾರ್ಯಕ್ರಮ ಆ.11 ಶನಿವಾರದಂದು ನಡೆಯಿತು.

krushi-kushi (1)

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕ ಉಮನಾಥ್ ಕೋಟ್ಯಾನ್ ಮಾತನಾಡಿ, ಆಷಾಢ ತಿಂಗಳು ಬಂತೆಂದರೆ ಅಲ್ಲಲ್ಲಿ ‘ಆಟಿದ ಗಮ್ಮತ್’, ‘ಕೆಸರ್‍ಡೊಂಜಿ ದಿನ’ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮಗಳು ಕೇವಲ ಗೌಜಿ, ಗಮ್ಮತ್ತಿಗೆ ಸೀಮಿತವಾಗದೆ ನಮ್ಮ ಕೃಷಿ ಪರಂಪರೆಯಲ್ಲಿ ಆಷಾಢ ತಿಂಗಳ ಆಚರಣೆ ಮತ್ತು ಅದರ ಮಹತ್ವವನ್ನು ಇಂದಿನ ಮಕ್ಕಳಿಗೆ ತಿಳಿಯಪಡಿಸುವ ಕೆಲಸ ಆಗಬೇಕು. ಹಿಂದಿನ ಕೃಷಿಕರು ಶ್ರಮಜೀವಿಗಳು ಮತ್ತು ಸಂಸ್ಕಾರದ ಬದುಕು ನಡೆಸಿಕೊಂಡು ಬಂದವರು. ಇದನ್ನು ಇಂದಿನ ಮಕ್ಕಳು ಮುಂದಿವರಿಸಿಕೊಂಡು ಹೋಗಬೇಕು ಎಂದು ಸಲಹೆಯಿತ್ತರು.

ಇದಕ್ಕೂ ಮೊದಲು ಮಾಜಿ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಕೃಷಿಕರಿಗೆ ಬಡ್ಡಿ ರಹಿತ ಸಾಲ, ಕಡಿಮೆ ಬಡ್ಡಿಯಲ್ಲಿ ಸಾಲದಂತಹ ದಿಟ್ಟ ನಿರ್ಧಾರವನ್ನು ಸರಕಾರ ತೆಗೆದುಕೊಂಡಿರುವುದರಿಂದ ರೈತರು ಸಾಲದ ಶೂಲದಲ್ಲಿ ಸಿಕ್ಕಿ ಹಾಕಿಕೊಳ್ಳುವ ಪ್ರಮೇಯಗಳು ಕಡಿಮೆಯಾಗಿವೆ. ರೈತರು ಮಿಶ್ರ ಬೆಳೆಯನ್ನು ಬೆಳೆಯುವ ಮೂಲಕ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದರು.

krushi-kushi (2)

ಮಂಗಳೂರು ಅಕಾಶವಾಣಿ ಕಾರ್ಯಕ್ರಮ ನಿರ್ದೇಶಕ ಡಾ.ಸದಾನಂದ ಪೆರ್ಲ ಸ್ವಚ್ಛ ಭಾರತ್ ಮತ್ತು ಜೈನ್ ಹೈಸ್ಕೂಲ್‍ನ ಮುಖ್ಯೋಪಧ್ಯಾಯ ಮುನಿರಾಜ ರೆಂಜಾಳ ಕೃಷಿ ಬದುಕಿನ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಅಶ್ವತ್ಥ ಶೆಟ್ಟಿ, ಎಂಸಿಎಸ್ ಬ್ಯಾಂಕ್ ಉಪಾಧ್ಯಕ್ಷ ಜಾರ್ಜ್ ಮೋನಿಸ್, ನಿರ್ದೇಶಕ ಬಾಹುಬಲಿ ಪ್ರಸಾದ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಉಪಸ್ಥಿತರಿದ್ದರು.
ಎಂಸಿಎಸ್ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಪ್ರಾಸ್ತಾವಿಕ ಮಾತನಾಡಿದರು. ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಸ್ವಾಗತಿಸಿದರು. ಯತಿರಾಜ್ ಜೈನ್ ನಿರೂಪಿಸಿದರು. ಜಿನೇಂದ್ರ ಹೆಗ್ಡೆ ವಂದಿಸಿದರು.
ಬಳಿಕ ವಲಯದ ಶಾಲಾ ಮಕ್ಕಳಿಗೆ ರಸ ಪ್ರಶ್ನೆ ಕಾರ್ಯಕ್ರಮ ನಡೆಯಿತು. ಬಳಿಕ ಕುದ್ರೋಳಿ ಗಣೇಶ್ ಅವರು ಸ್ವಚ್ಚತೆಯ ಸಂದೇಶ ಸಾರುವ ಜಾದೂ ನಡೆಸಿಕೊಟ್ಟರು. ಕುದ್ರೊಳಿ ಗಣೇಶ್ ಅವರನ್ನು ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಸನ್ಮಾನಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter