Published On: Thu, Jul 26th, 2018

ಕುತೂಹಲ ಮೂಡಿಸಿದ ಚಂದ್ರಗ್ರಹಣ

ಪತ್ರಿ ಬಾರಿಯಂತೆ ಈ ಬಾರಿಯೂ ಚಂದ್ರಗ್ರಹಣ ಕುತೂಹಲ ಮೂಡಿಸಿದೆ. ಅದರಲ್ಲಿಯೂ ಈ ಬಾರಿಯ ಚಂದ್ರಗ್ರಹಣ ತುಸು ಹೆಚ್ಚಾಗಿಯೇ ತನ್ನ ಗ್ರಹಣದ ಸದ್ದು ಮಾಡುತ್ತಿದೆ. ಜುಲೈ 27ರ ಚಂದ್ರಗ್ರಹಣಕ್ಕಾಗಿ ಇಡೀ ಪ್ರಪಂಚವೇ ಕೌತುಕದಿಂದ ಕಾಯುತ್ತಿದೆ. ಜನರು ಇಷ್ಟು ಕಾತುರದಿಂದ ಕಾಯಲು ಕಾರಣ ಟಿ.ವಿ ಮಾದ್ಯಮಗಳಲ್ಲಿ ಪ್ರಸಾರವಾಗುವ ಜ್ಯೋತಿಷಿಗಳ ಮಹತ್ವದ ಚರ್ಚೆ ಹಾಗೂ ಗ್ರಹಚಾರದ ಲೆಕ್ಕಾಚಾರ. ಇನ್ನೊಂದು ಕಡೆ ವಿಜ್ಞಾನಿಗಳು ಹಲವು ಶತಮಾನಗಳಿಂದ ವಿಶಿಷ್ಟ ಖಗೋಳ ವಿದ್ಯಮಾನವೊಂದಕ್ಕೆ ಸಾಕಿಯಾಗುವಂತೆ ಚಂದ್ರಗ್ರಹಣಕ್ಕೆ ಕಾಯುತ್ತಿದ್ದಾರೆ.

moon eclips
ಚಂದ್ರ ಒಂದು ನೈಸರ್ಗಿಕ ಉಪಗ್ರಹವಾಗಿದ್ದು, ಸುಮಾರು 3ಲಕ್ಷ84 ಸಾವಿರ ದೋರದಲ್ಲಿರುವ ಕಕ್ಷೆಯಲ್ಲಿ ಭೂಮಿ ಸುತ್ತುತ್ತಿರುತ್ತದೆ. ಕೆಲವೊಮ್ಮೆ ಹುಣ್ಣಿಮೆಯ ಸಂದರ್ಭದಲ್ಲಿ ಸೂರ್ಯ, ಭೂಮಿ,  ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಭೂಮಿಯ ನೆರಳಲ್ಲಿ ಸೆರೆಯಾಗುವಂತಹ ಚಂದ್ರನಿಂದ ಗ್ರಹಣ ಉಂಟಾಗುತ್ತದೆ ಎಂದು ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಮಾಧ್ಯಮಗಳು ಹುಟ್ಟಿಹಾಕಿರುವ ಭಯದಿಂದ ಹೊರಬಂದು ಚಂದ್ರಗ್ರಹಣದ ಸೌಂದರ್ಯವನ್ನು ಅನುಭವಿಸಬೇಕು.
ಈ ಚಂದ್ರಗ್ರಹಣ ಈ ಶತಮಾನದ ಅಂದರೆ 2001 ರಿಂದ 2100ವರ್ಷದ ಅತ್ಯಂತ ದೀರ್ಘ ಚಂದ್ರಗ್ರಹಣವಾಗಿದ್ದು, ಸುಮಾರು ಒಂದು ತಾಸು 43 ನಿಮಿಷಗಳ ಕಾಲದ ಗ್ರಹಣ ವಿಶೇಷವಾದುದು. ಪ್ರಪಂಚದ ಅನೇಕ ಪ್ರದೇಶಗಳಲ್ಲಿ ಈ ಗ್ರಹಣದ ನೆರಳು ಬೆಳಕಿನ ಆಟವನ್ನು  ಭಾರತದಲ್ಲಿಯೂ ವೀಕ್ಷಿಸಬಹುದು. ಆದರೆ ಇದಕ್ಕೆ ಮೋಡ ಇಲ್ಲದೆ, ಮಳೆ ಬಾರದಿದ್ದರೆ ಗ್ರಹಣವನ್ನು ಯಾವುದೇ ಅಡ್ಡಿಯಿಲ್ಲದೇ ವೀಕ್ಷಿಸಬಹುದಾಗಿದೆ. ಈ ಗ್ರಹಣ ಭೂಮಿಯ ನೆರಳನ್ನು ಚಂದ್ರ ಪ್ರವೇಶಿಸುವ ಕಾಲ ಭಾರತದಲ್ಲಿ ರಾತ್ರಿ 11.45. ಆದರೆ ಪೂರ್ತಿ ಚಂದ್ರಗ್ರಹಣ ಜು.28ರ ಬೆಳಗ್ಗೆ 1.52ಕ್ಕೆ, ಅಂದರೆ ಭೂಮಿಯ ನೆರಳನ್ನು ಚಂದ್ರ ದಾಟಿ ಗ್ರಹಣ ಮುಗಿಯುವ ಸಮಯ 28ರ ಬೆಳಗ್ಗೆ 5ಗಂಟೆಗೆ.
ಇದೇ ವರ್ಷದ ಜನವರಿಯಲ್ಲಿ ನಡೆದ ಚಂದ್ರಗ್ರಹಣ 1ಗಂಟೆ 16 ನಿಮಿಷಗಲ ಕಾಲ ಇತ್ತು. ಹಾಗೆಯೇ 2019ರ ಜನವರಿಯಲ್ಲಿ ಚಂದ್ರಗ್ರಹಣ 1 ಗಂಟೆ 2ನಿಮಿಷಗಳ ಕಾಲ ನಡೆಯಲಿದೆ. ಭೂಮಿ ಹಾಗೂ ಚಂದ್ರರ ನಡುವಿನ ದೂರವನ್ನು ಪರಿಗಣಿಸಿ ಸಾದ್ಯವಿರುವ ಶಕ್ಯವಿರುವ ಗ್ರಹಣಕಾಲ 1ಗಂಟೆ 47 ನಿಮಿಷ. ಆದ್ದರಿಂದ 1 ಗಂಟೆ 43 ನಿಮಿಷ ನಡೆಯುವ ಗ್ರಹಣ ಅತ್ಯಂತ ದೀರ್ಘವಾದುದು ಎಂದು ಮೂಲಗಳು ತಿಳಿಸಿದೆ. ಭೂಮಿಯಿಂದ ಚಂಧ್ರ ತನ್ನ ಕಕೆಯಲ್ಲಿ ದೂರ ಗೋಚರಿಸಲಿದ್ದು, ಚಿಕ್ಕದಾಗಿ ಕಾಣಿಸುವ ಸಾಧ್ಯತೆ ಇದೆ. ಹಾಗಾಗಿ ಈ ಸಲದ ಗ್ರಹಣವನ್ನು ಮಿನಿ ಮೂನ್ ಅಥವಾ ಮೈಕ್ರೋ ಮೂನ್ ಎಂತಲೂ ಕರೆಯಲಾಗುತ್ತಿದೆ. ಅತ್ಯಂತ ನಿಧಾನ ಗತಿಯಲ್ಲಿ ಚಲಿಸುವ ಚಂದ್ರನು ಭೂಮಿಯ ನೆರಳನ್ನು ದಾಟಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಗ್ರಹಣ ದೀರ್ಘವಾಗುತ್ತದೆ ಎನ್ನಲಾಗಿದೆ.
ಸಹಜವಾಗಿ ಬೆಳ್ಳಿ ಬಣ್ಣದ ತಂಪು ಚಂದ್ರ ರಕ್ತ ಕೆಂಪು ಬಣ್ಣದಲ್ಲಿ ಕಾಣಿಸಲಿದ್ದಾನೆ. ಸೂರ್ಯನಿಂದ ಬರುವ ನೀಲಿ ಬೆಳಕು ಭೂಮಿಯ ವಾತಾವರಣ ನೀಲಿ ಬಣ್ಣ ತಿರುಗಿ, ಭೂಮಿಯ ವಾತಾವರಣ ದಾಟಿ ಮುಂದೆ ಸಾಗುವ ಕಡಿಮೆ ಪ್ರತಿಫಲನ ಹೊಂದುವ ಕೆಂಪು ಕಿರಣ ಚಂದ್ರನನ್ನು ತಲುಪಿ ಚಂದ್ರನನ್ನು ಕೆಂಪಾಗಿಸುತ್ತದೆ. ಈ ಸಲದ ಮತ್ತೊಂದು ಖಗೋಳ ರಸದೌತಣ ಅಂಗಾರಕನದು. ಮಂಗಳನೂ ಭೂಮಿಯ ವಿರುದ್ಧ ಅಂದರೆ ಚಂದ್ರನ ಅತ್ಯಂತ ಸಮೀಪ ಹಾಗೂ ಅತ್ಯಂತ ಪ್ರಕಾಶಮಾನವಾಗಿ ಮತ್ತು ಕೆಂಪಗೆ ಕಾಣಿಸಲಿದೆ.
ಚಂದ್ರಗ್ರಹಣ ಎಂದು ಭಯಪಡುವ ಅವಶ್ಯಕತೆಯಿಲ್ಲ. ಇದೊಂದು ಅಪೂರ್ವ ಕ್ಷಣ ಯಾವುದೇ ಸಾಧನದ ಅಗತ್ಯವಿಲ್ಲದೆ ಬರಿಯ ಕಣ್ಣಿನಿಂದಲೂ ಸುರಕ್ಷಿತವಾಗಿ ವೀಕ್ಷಿಸಬಹುದಾಗಿದೆ. ಮೂಢ ನಂಬಿಕೆ ಬಿಟ್ಟು, ವಿಜ್ಞಾನದ ಕಣ್ಣಿನಿಂದ ಚಂದ್ರಗ್ರಹಣದ ಸೌದಂರ್ಯ ವೀಕ್ಷಿಸುವುದು ಉತ್ತಮ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter