Published On: Wed, Jul 18th, 2018

ರೈತರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಕಲ್ಲಡ್ಕ: ರೈತರ ಸೇವಾ ಸಹಕಾರ ಸಂಘದ 2017-2018 ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ.ಕೆ.ಪದ್ಮನಾಭ ಕೊಟ್ಟಾರಿಯವರ ಅಧ್ಯಕ್ಷತೆಯಲ್ಲಿ ಶ್ರೀರಾಮ ಮಂದಿರದ “ಮಾಧವ ಸಭಾ” ಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ 2017-2018 ನೇ ಸಾಲಿನಲ್ಲಿ ಲೆಕ್ಕ ಪರಿಶೋಧನೆಯಂತೆ 256 ಕೋಟಿ ವ್ಯವಹಾರ ನಡೆಸಿ ‘ಎ’ ಗ್ರೇಡ್ ಹೊಂದಿದ್ದು ರೂ. 1.22 ಕೋಟಿ ಲಾಭವನ್ನು ಗಳಿಸಿರುತ್ತದೆ, ಸದಸ್ಯರಿಗೆ 12% ಡಿವಿಡೆಂಡು ನೀಡುವುದೆಂದು ಘೋಷಿಸಿದರು.

kalladka former association
ಸಂಘದ ಕಾರ್ಯಯೋಜನೆಯ ಬಗ್ಗೆ ಮಾತನಾಡುತ್ತ, ಸಂಘದ ಸದಸ್ಯರಿಗೆ ಕೃಷಿಯೇತರ ಸಾಲಗಳಾದ ವಾಹನ ಖರೀದಿ, ಗೃಹ ನಿರ್ಮಾಣ, ಉಚಾಪತಿ ಸಾಲ (ಔ.ಆ) ನೀಡುವುದು. ಸಾಲಗಾರ ಸದಸ್ಯರ ಮನೆ ಪ್ರಕೃತಿ ವಿಕೋಪದಿಂದಾಗಿ ಹಾನಿಗೊಂಡಾಗ ಆರ್ಥಿಕ ಸಹಾಯ, ವಿಶೇಷ ಕಾಯಿಲೆಗೊಳಗಾದವರಿಗೆ ಆರ್ಥಿಕ ಸಹಾಯ, ಬೆಳೆ ಸಾಲ ಪಡೆದ ರೈತರು ಮೃತಪಟ್ಟ್ಟ್ಟಲ್ಲಿ ಅವರ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡಿದ ಅವರ ವಾರೀಸುದಾರರಿಗೆ ರೂ.10000 ದ ಭಾಗ್ಯನಿಧಿ ಸೌಲಭ್ಯ ಮತ್ತು ಭತ್ತದ ಕೃಷಿಯಲ್ಲಿ ವಿಶೇóಷ ಸಾಧನೆಗೈದವರನ್ನು ಗುರುತಿಸುವ ಕೆಲಸ ಈಗಾಗಲೇ ಹಮ್ಮಿಕೊಳ್ಳಲಾಗಿದ್ದು, ಮುಂದಿನ ಕಾರ್ಯಯೋಜನೆಯು ಸಂಘದ ವ್ಯಾಪ್ತಿಯ 5 ಗ್ರಾಮಗಳಲ್ಲಿರುವ ಅಂಗವಿಕಲ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮತ್ತು ಸಂಘದಿಂದ ಕೃಷಿ ಸಾಲ ಪಡೆದ ಸಣ್ಣ ಮತ್ತು ದೊಡ್ಡ ರೈತರು ಸಂಘದ ಸಹಯೋಗದೊಂದಿಗೆ ಕ್ಯಾಂಪ್ಕೋ ಸಂಸ್ಥೆಗೆ ಅತ್ಯಂತ ಹೆಚ್ಚು ಅಡಿಕೆ ವಿಕ್ರಯಿಸಿದವರನ್ನು ಗೌರವಿಸುವ ಕಾರ್ಯ ಮತ್ತು ಮಹಾಸಭೆಯಲ್ಲಿ ಗುರುತಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಹಾಗೂ ಸಂಘದ ಸದಸರ್ಯ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹಿಸುವ ಬಗ್ಗೆ ತಿಳಿಸಿದರು.
2015-2016 ಮತ್ತು 2016-2017 ನೇ ಸಾಲಿನಲ್ಲಿ ಸಂಘದ ವ್ಯವಹಾರದ ಪ್ರಗತಿಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮಹಾಸಭೆಯಲ್ಲಿ ಸಂಘವು ಪ್ರೋತ್ಸಾಹಕ ಬಹುಮಾನ ಪಡೆದುಕೊಂಡಿರುವುದನ್ನು ತಿಳಿಸಲಾಯಿತು.
ಶ್ರೀಮತಿ ವಿಜಯ ಪ್ರಕಾಶ್ ರವರ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮ ಪ್ರಾರಂಭಗೊಂಡಿತು. ನಿರ್ದೇಶಕರಾದ ವೆಂಕಟ್ರಾಯ ಪ್ರಭು ರವರು ಸ್ವಾಗತಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ್.ಕೆ 2017-2018 ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಬಿ.ಸುಧಾಕರ ರೈ, ನಿರ್ದೇಶಕರಾದ ಗೋಪಾಲಕೃಷ್ಣ ಭಟ್, ಪೂವಪ್ಪ ಗೌಡ, ಲೋಕಾನಂದ, ಗಿರಿಯಪ್ಪ ಗೌಡ, ವೆಂಕಟ್ರಾಯ ಪ್ರಭು, ಜಯರಾಮ ರೈ, ಕೊರಗಪ್ಪ ನಾಯ್ಕ, ಶ್ರೀಮತಿ ಮೃಣಾಲಿನಿ ಸಿ ನಾಯ್ಕ್, ಶ್ರೀಮತಿ ಮೀನಾಕ್ಷಿ ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕರಾದ ಗೋಪಾಲ.ಕೆ, ಶ್ರೀಮತಿ ವನಿತ ಮತ್ತು ಕೇಶವ.ಯಂ ರವರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಲೋಕಾನಂದರವರು ವಂದನಾರ್ಪಣೆಗೈಯುವುದರೊಂದಿಗೆ ಸಭಾ ಕಾರ್ಯಕ್ರಮ ಸಮಾಪನಗೊಂಡಿತು. ನಾಗೇಶ ಶೆಟ್ಟಿ ಬೊಂಡಾಲರವರು ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter