Published On: Sat, Jul 14th, 2018

ಅಮೆರಿಕಾದಲ್ಲಿ ತೆಂಕುತಿಟ್ಟು ಯಕ್ಷಗಾನ

ಮೂಡುಬಿದಿರೆ: ಇಲ್ಲಿನ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಸಂಯೋಜನೆಯಲ್ಲಿ ಅಮೆರಿಕಾದ ವಿವಿಧ ಕಡೆಗಳಲ್ಲಿ ಜುಲೈ 14 ರಿಂದ ಆಗಸ್ಟ್ 20 ರವರೆಗೆ ‘ಮಹಿಷ ಮರ್ದಿನಿ, ಶ್ರೀ ದೇವಿ ಮಹಾತ್ಮೈ, ಸುಧನ್ವಕಾಳಗ ಸಹಿತ ವಿವಿಧ ಪ್ರಸಂಗಗಳು, ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ.

America Yakshagana
ಭಾಗವತ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯ, ಎಮ್.ದೇವಾನಂದ ಭಟ್ ಬೆಳುವಾಯಿ, ಎಮ್.ಎಲ್ ಸಾಮಗ, ಚಂದ್ರಶೇಖರ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಮೋಹನ್ ಬೆಳ್ಳಿಪಾಡಿ ಹಾಗೂ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಇವರನ್ನು ಒಳಗೊಂಡಿದೆ. ಅಮೆರಿಕಾ ಪ್ರವಾಸದ ಪೂರ್ವಸಿದ್ಧತೆಯಲ್ಲಿ ತಂಡವು ಚೆನೈನ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ಹಾಗೂ ನೃತ್ಯ ಶಿಕ್ಷಣ ಸಂಸ್ಥೆ ಕಲಾಕ್ಷೇತ್ರದಲ್ಲಿ ಪ್ರಾತ್ಯಾಕ್ಷಿಕೆಯೊಂದಿಗೆ `ನರಕಾಸುರ ವಧೆ’ ಎಂಬ ಕಥಾನಕವನ್ನು ಪ್ರದರ್ಶಿಸಿತು ಎಂದು ಕಾರ್ಯಕ್ರಮದ ಸಂಯೋಜಕ ಎಮ್.ದೇವಾನಂದ ಭಟ್ ಬೆಳುವಾಯಿಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter