ಬಿ.ಮೂಡ ಶಿಕ್ಷಕ-ರಕ್ಷಕ ಸಭೆ
ಬಂಟ್ವಾಳ : ಪದವಿ ಪೂರ್ವ ಶಿಕ್ಷಣ ಹಂತವು ಹದಿಹರೆಯದ ವಿದ್ಯಾರ್ಥಿಗಳ ಜೀವನದ ಮಹತ್ವಪೂರ್ಣ ಘಟ್ಟವಾಗಿದ್ದು ಹೆತ್ತವರು ತಮ್ಮ ಮಕ್ಕಳೊಂದಿಗೆ ನಿರಂತರ ಮತ್ತು ನಿಕಟ ಸಂವಹನ ಮಾಡುತ್ತಾ ಅವರಲ್ಲಿ ಶೈಕ್ಷಣಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸಬೇಕೆಂದು ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡ ಇಲ್ಲಿನ ಪ್ರಾಚಾರ್ಯರಾದ ಯೂಸುಫ್ ಹೇಳಿದರು. ಅವರು ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಪೋಷಕರು ಹಾಗೂ ಶಿಕ್ಷಕರ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಪದವಿ ಪೂರ್ವ ಶಿಕ್ಷಣ , ಪರೀಕ್ಷೆ , ಫಲಿತಾಂಶ , ಸಂಸ್ಥೆಯ ಬೆಳವಣಿಗೆ ಹಾಗೂ ನೀತಿ ನಿಯಮಗಳ ಕುರಿತು ಅರ್ಥಶಾಸ್ತ್ರ ಉಪನ್ಯಾಸಕ ಬಾಲಕೃಷ್ಣ ನಾಯ್ಕ್ ಕೆ ಸಮಗ್ರ ಮಾಹಿತಿಯನ್ನು ನೀಡಿದರು. ಉಪನ್ಯಾಸಕರಾದ ಶ್ರೀ ವೆಂಕಟೇಶ್ವರ ಭಟ್ , ಶ್ರೀಮತಿ ಯಶೋಧ ಕೆ , ಶ್ರೀಮತಿ ಲವೀನಾ ಶಾಂತಿ ಲೋಬೋ ಉಪಸ್ಥಿತರಿದ್ದರು. ಉಪನ್ಯಾಸಕ ದಾಮೋದರ್ ಸ್ವಾಗತಿಸಿ ಅಬ್ದುಲ್ ರಝಾಕ್ ಧನ್ಯವಾದ ನೀಡಿದರು.