Published On: Fri, Jul 13th, 2018

ವರುಣನ ಕೋಪದ ನಡುವೆಯೂ ಮಾನವೀಯತೆ ಮೆರೆದ ಕನ್ನಡಿಗ ಸಮಾಜ ಸೇವಕರು

ಮುಂಬಯಿ:: ಉಪನಗರ ನಲ್ಲಸೋಫರಾ ಪಶ್ಚಿಮದ ಹೋಟೆಲ್ ಉದ್ಯಮಿ, ಹೋಟೆಲ್ ಆರಾಮ್ ಇದರ ಮಾಲಿಕ ಅಶೋಕ್ ಸಾಲಿಯನ್ ಮತ್ತು ಬಳಗದ ತೆರೆಮರೆಯ ಸಮಾಜ ಸೇವಕರಾದಂಥ ಸುಧಾಕರ್ ಪೂಜಾರಿ (ಗಾರ್ನೀಶ್), ಸದಾಶಿವ ಎ.ಕರ್ಕೇರ, ಅರುಣ್ ಶೆಟ್ಟಿ, ಮತ್ತಿತರ ತುಳುಕನ್ನಡಿಗ ಮಿತ್ರರು ಅತೀವೃಷ್ಠಿ ಪೀಡಿತ ಪ್ರದೇಶದ ಜನರಿಗೆ ಉಪಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

IMG-20180713-WA0098
ಮುಂಬಯಿ ಮಹಾನಗರದಲ್ಲಿ ಕಳೆದ ಮೂರು ದಿವಸಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಅನೇಕ ಜನರು ಪ್ರಯಾಣ, ಆಹಾರದ ತೊಂದರೆಗೆ ಸಿಲುಕಿದ್ದರು. ಅನೇಕರು ಹೊಟ್ಟೆಪಾಡಿಗಾಗಿ ಹಾತೊರೆಯುತ್ತಿದ್ದರು ಇದನ್ನು ಮನವರಿಸಿಕೊಂಡ ನಲ್ಲಸೋಫರಾ ಅಲ್ಲಿನ ಸಮಾಜ ಚಿಂತಕರು ಗೆಳೆಯರನ್ನು ಒಗ್ಗೂಡಿಸಿ ಧಾರಾಕಾರ ನೀರಿನ ನಡುವೆಯೂ ತಮ್ಮ ಜೀವದ ಹಂಗು ತೊರೆದು ಜನರಿಗೆ ಬೇಕಾದ ಉಪಹಾರ ದೋಸೆ, ವಡಾಪಾವ್, ಮಿಸಲ್ ಇತರೇ ತಿಂಡಿ ತಿನಿಸುಗಳು, ಚಾ-ಕಾಫಿ, ನೀರು ಒದಗಿಸುವ ಮೂಲಕ ಕಷ್ಟ ಕಾಲದಲ್ಲಿದ್ದ ಜನರಲ್ಲಿ ದಯೆ ತೋರಿ ದೇವರು ಮೆಚ್ಚುವಂಥ ಕೆಲಸಕ್ಕೆ ಪಾತ್ರರಾಗಿದ್ದಾರೆ. ಇಂತಹ ಸೇವೆ ಮಾದರಿ ಮತ್ತು ಇತರರಿಗೆ ಮಾರ್ಗದರ್ಶಕವಾಗಿದೆ.IMG-20180713-WA0096

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter