Published On: Fri, Jul 13th, 2018

ನಾಪತ್ತೆಯಾದ ಮಹಿಳೆ ಶವವಾಗಿ ಪತ್ತೆ

ವಾಮಂಜೂರು: ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯ ಶವವು ಫಲ್ಗುಣಿ ನದಿಯ ಸಮೀಪದ ತೋಡಿನಲ್ಲಿ ಪತ್ತೆಯಾಗಿದೆ. ಮಲ್ಲೂರಿನ ಪಲ್ಲಿಬೆಟ್ಟು ನಿವಾಸಿ ಗೋಪಾಲ ಮೂಲ್ಯ ಎಂಬವರ ಪುತ್ರಿ ಧನವತಿ(35) ಎಂದು ಗೊತ್ತಾಗಿದೆ.13danavathi

13vp dhanavathi
ಘಟನೆಯ ವಿವರ: ಧನವತಿ ಅವರನ್ನು ಕೆಲವು ವರ್ಷಗಳ ಹಿಂದೆ ಗುಜರಾತ್‍ಗೆ ಮದುವೆ ಮಾಡಿಕೊಡಲಾಗಿತ್ತು. ಅವರಿಗೆ ಎರಡೂವರೆ ವರ್ಷದ ಮಗುವೊಂದಿದ್ದು, ಗಂಡ ತಾಯಿ ಮಗು ತವರಿಗೆ ಬಂದಿದ್ದರು. ಗುರುವಾರ ಬೆಳಗ್ಗೆ ಧನವತಿಯವರ ತಾಯಿ ಆಕೆಯ ಮಗುವನ್ನು ಅಂಗನವಾಡಿಗೆ ಸೇರಿಸಲು ಹೋಗಿ ವಾಪಸ್ ಬಂದಾಗ ಮನೆಗೆ ಚಿಲಕ ಹಾಕಲಾಗಿತ್ತು. ಮೊಬೈಲ್ ಮನೆಯಲ್ಲೇ ಬಿಟ್ಟುಹೋಗಿದ್ದ ಧನವತಿಯವರು ನೈಟಿಯಲ್ಲೇ ತೆರಳಿದ್ದರು ಎಂದು ತಿಳಿದುಬಂದಿದೆ. ಆತಂಕಗೊಂಡ ಮನೆಯವರು ಸುತ್ತಮುತ್ತ ಹುಡುಕಾಡಿ ಸಿಗದಿದ್ದಾಗ ವಾಮಂಜೂರಿನ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ರಾತ್ರಿಯೂ ಸ್ಥಳೀಯರ ನೆರವಿನಿಂದ ಹುಡುಕಾಡಲಾಗಿತ್ತು.
ಆದರೆ ಶುಕ್ರವಾರ ಬೆಳಿಗ್ಗೆ ಫಲ್ಗುಣಿ ನದಿಗೆ ಸಮೀಪದ ತೋಡಿನಲ್ಲಿ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ. ಸ್ಥಳಿಯರ ನೆರವಿನೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು,    ಧನವತಿ ಅವರು  ಕಾಲು ಜಾರಿ ತೋಡಿಗೆ ಬಿದ್ದಿರಬಹುದೆಂದು   ಹೇಳಲಾಗಿದೆ. ವಾಮಂಜೂರು ಪೊಲೀಸರ್ ಮಹಜರು  ನಡೆಸಿ ದ್ದಾರೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter