Published On: Fri, Jul 13th, 2018

ಮುತ್ತೂರು ಗ್ರಾಮ ಪಂಚಾಯತ್‍ನ ಗ್ರಾಮಸಭೆ ಕೃಷಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಎಡಪದವು: ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಸಹಾಯಕ ಕೃಷಿ ನಿರ್ದೇಶಕರನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮುತ್ತೂರು ಗ್ರಾಮ ಪಂಚಾಯತ್‍ನ ಗ್ರಾಮ ಸಭೆಯಲ್ಲಿ ನಡೆದಿದೆ. ಇಲ್ಲಿನ ಪ್ರಥಮ ಹಂತದ ಗ್ರಾಮ ಸಭೆಗೆ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಸಹಾಯಕ ಕೃಷಿ ನಿರ್ದೇಶಕ ಕುಲಕರ್ಣಿಯವರು ಕೃಷಿ ಇಲಾಖೆಯಿಂದ ಸಿಗುವ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದಾಗ, ನೀವು ಗ್ರಾಮ ಸಭೆಗೆ ಬಂದು ಮಾಹಿತಿ ನೀಡುತ್ತೀರಿ. ನಿಮ್ಮ ಕಚೇರಿಯಲ್ಲಿ ಕೇಳಿದರೆ ಯಾವ ಸವಲತುಗಳೂ ಸಿಗುತ್ತಿಲ್ಲ. ಒಂದು ಸವಲತ್ತಿಗಾಗಿ ಹಲವು ಬಾರಿ ಅರ್ಜಿ ಕೇಳುತ್ತೀರಿ. ನಮಗೆ ಅರ್ಜಿ ಕೊಡುವುದೇ ಕೆಲಸವೇ? ಕೃಷಿ ಇಲಾಖೆಯ ಕಚೇರಿಗೆ ಬಂದರೆ ರೈತರನ್ನು ಕೇಳುವ ಗತಿ ಇಲ್ಲ. ಇತ್ತೀಚೆಗೆ ನೀವು ಹಮ್ಮಿಕೊಂಡ ಕೃಷಿ ಅಭಿಯಾನ ಯಾರಿಗಾಗಿ? ಪೇಟೆಯಲ್ಲಿ ಕೃಷಿ ಅಭಿಯಾನ ಮಾಡುವುದು ಪೇಟೆಯ ಕೃಷಿ ವ್ಯಾಪಾರಿಗಳಿಗಾಗಿಯೇ? `ಇಲಾಖೆಗಳ ನಡಿಗೆ ರೈತರ ಕಡೆಗೆ’ ಎಂದು ಘೋಷಣೆ ಬರೆದಿದ್ದೀರಿ. ನೀವು ಎಷ್ಟು ರೈತರಿದ್ದಲ್ಲಿಗೆ ಹೋಗಿದ್ದೀರಿ? ರೈತರು ಹಳ್ಳಿಗಳಲ್ಲೇ ಇರುವುದು ವಿನಹ ಪೇಟೆಯಲ್ಲಲ್ಲ. ನಾವು ಎಲ್ಲಾ ಕೆಲಸ ಬಿಟ್ಟು ಬರಬೇಕು ನೀವು ಗ್ರಾಮ ಸಭೆಗೆ ಬಂದು ಭಾಷಣ ಹೊಡೆದು ಭತ್ಯೆ ಪಡೆಯುತ್ತೀರಿ. ನಮಗೆ ದುಡಿದರೆ ಮಾತ್ರ ದುಡ್ಡು, ನೀವು ಸಂಬಳ, ಭತ್ಯೆ ಪಡೆಯದೆ ಇಲ್ಲಿಗೆ ಬರುತ್ತೀರಾ? ಎಂದು ಪ್ರಗತಿಪರ ಕೃಷಿಕ ದಯಾನಂದ ಶೆಟ್ಟಿ ಪುಣ್ಕೆದಡಿಯವರ ಆಕ್ರೋಶಭರಿತ ಪ್ರಶ್ನೆಗೆ ಯಾವೊಬ್ಬ ಅಧಿಕಾರಿಯೂ ಉತ್ತರಿಸಲಾಗದೆ ಮೌನಕ್ಕೆ

1307malali2ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು ದೊಡ್ಡಳಿಕೆ ಫಲ್ಗುಣಿ ನದಿಯಿಂದ ನೋಣಲ್ ಎಂಬಲ್ಲಿಗೆ ರೈತರು ಬೆಳೆಗಳಿಗೆ ನೀರು ಹರಿಸಲು ಇರುವ ಕಾಲುವೆಯನ್ನು ಪ್ರತೀವರ್ಷ ಮೂರ್ನಾಲ್ಕು ಲಕ್ಷ ಖರ್ಚು ಮಾಡಿ ದುರಸ್ಥಿ ಮಾಡುತ್ತೀರಿ. ಆದರೆ ನೀರು ಮಾತ್ರ ಹರಿಯುವುದಿಲ್ಲ. ಕ್ಲಪ್ತ ಸಮಯದಲ್ಲಿ ದುರಸ್ಥಿ ಮಾಡದ ಕಾರಣ ರೈತರಿಗೆ ತೊಂದರೆಯಾಗುತ್ತಿದೆ. ತಡೆಗೋಡೆ ನಿರ್ಮಾಣ ಯೋಜನೆಯನ್ನು ಕೆಲವೇ ವ್ಯಕ್ತಿಗಳಿಗೆ ಅನುಕೂಲವಾಗುವ ಸ್ಥಳದಲ್ಲಿ ಕಟ್ಟುತ್ತೀರಿ. ಮುಂದಿನ ನವೆಂಬರ್ ಒಳಗಡೆ ಕಾಲುವೆಯನ್ನು ದುರಸ್ಥಿ ಮಾಡಿ ನೀರು ಹರಿಸದೇ ಇದ್ದರೆ ತೀವ್ರ ಹೋರಾಟ ನಡೆಸುವುದಾಗಿ ವಿಜಯಕುಮಾರ್ ಶೆಟ್ಟಿ ಎಂಬವರು ಎಚ್ಚರಿಸಿದರು.
ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಪ್ರಭಾವತಿ, ಪಿಡಿಓ ವಸಂತಿ, ಪಿಡಬ್ಲ್ಯೂಡಿ ಇಂಜಿನಿಯರ್ ವಿಶ್ವನಾಥ್, ಮೆಸ್ಕಾÀ್ನ ಜೆಯಿ, ಸಣ್ಣನೀರಾವರಿ ಇಲಾಖಾ ಇಂಜಿನಿಯರ್ ಆನಂದ, ಮಕ್ಕಳ ಮಹಿಳಾ ಇಲಾಖೆಯ ಮಾಲಿನಿ, ಗ್ರಾಮಕರಣಿಕ ದೇವರಾಜ್, ತೋಟಗಾರಿಕೆ ಇಲಾಖೆಯ ಮಹೇಶ್, ಆರೋಗ್ಯ ನಿರೀಕ್ಷಕರು, ಪಂಚಾಯತ್ ಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.

ಮುಖ್ಯಾಂಶಗಳು
-ಬೊಳಿಯ ಎಂಬಲ್ಲಿ ಮನೆ ನಿವಾಸನಕ್ಕೆ ಖಾದಿರಿಸಿದ ಸರಕಾರಿ ಜಾಗವನ್ನು ಖಾಸಗಿಯೊಬ್ಬರು ಅತಿಕ್ರಮಿಸಿ ಕೃಷಿಗೆ ಮುಂದಾಗಿದ್ದು, ಇದನ್ನು ತೆರವುಗೊಳಿಸಿ ನಿವೇಶನದಾರ ಅರ್ಜಿದಾರರಿಗೆ ಒದಗಿಸುವಂತೆ ಒತ್ತಾಯ
-ಕುಡಿಯುವ ನೀರಲ್ಲಿ ತಾರತಮ್ಯ ಎಸಗುವ ಬಗ್ಗೆ ಗ್ರಾಮಸ್ಥರ ದೂರು
-ರೈತರು ಅರ್ಜಿ ಸಲ್ಲಿಸಿದರೂ ಸವಲತ್ತು ಸಿಗುತ್ತಿಲ್ಲ
-ಕ್ಲಪ್ತ ಸಮಯಕ್ಕೆ ಕಾಲುವೆ ದುರಸ್ಥಿಯಾಗುತ್ತಿಲ್ಲ

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter