ಬಂಟ್ವಾಳ: ಕೊಲೆ ಯತ್ನ ಪ್ರಕರಣದ ಮೂವರು ಆರೋಪಿಗಳು ಬಂಧನ
ಬಂಟ್ವಾಳ: ತಾಲೂಕಿನ ಬಡ್ಡಕಟ್ಟೆಯಲ್ಲಿ ಜೂನ್ 11ರಂದು ತಲವಾರು ಹಿಡಿದು ಯುವಕರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿದ್ದು, ಮತ್ತೆ ಮೂವರನ್ನು ಬಂಟ್ವಾಳ ವೃತ್ತ ನಿರೀಕ್ಷಕ ನಾಗರಾಜ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಪ್ರದೀಪ್ ಪ್ರಾಯ (28), ತಿಲಕ್ (28) ಮತ್ತು ಬಿಷಪ್ ಕಂಪೌಂಡ್ ನಿವಾಸಿ ಮನೋಹರ್ (28) ಬಂಧಿತ ಆರೋಪಿಗಳಾಗಿದ್ದು, ಇವರು ಕಸಬ ಗ್ರಾಮದ ನಿವಾಸಿಗಳು. ಪ್ರಕರಣದ ಇತರ ಆರೋಪಿಗಳಾದ ಸುರೇಂದ್ರ ಭಂಡಾರಿ , ಸತೀಶ್ ಕುಲಾಲ್ ಹಾಗೂ ಪೃಥ್ವಿರಾಜ್ ಜೆ ಶೆಟ್ಟಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು.