Published On: Wed, Jul 11th, 2018

ಮೂಡುಬಿದಿರೆ ಜೆಸಿಐ ತ್ರಿಭುವನ್‍ನಿಂದ ಆರೋಗ್ಯ ಶಿಬಿರ

ಮೂಡುಬಿದಿರೆ: ಬೀಡಿ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಆರೋಗ್ಯ ಸೇವೆ ಸವಲತ್ತು ಬಗ್ಗೆ ಮಾಹಿತಿ ಕೊರತೆಯಿದೆ. ಆದರೆ ಕಳೆದ ಆರು ತಿಂಗಳಿಂದ ಕಾರ್ಮಿಕ ಇಲಾಖೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಹೆಚ್ಚಿನ ಮುತುವರ್ಜಿವಹಿಸಿದ್ದೇವೆ. ಅವಿಭಜಿತ ಜಿಲ್ಲೆಯಲ್ಲಿ ಪ್ರಗತಿಪರ ಚಿಂತನೆ ಹೊಂದಿರುವ ಸಂಸ್ಥೆಗಳು ಕಾರ್ಮಿಕ ಇಲಾಖೆಗೆ ಜೊತೆ ಕೈಜೋಡಿಸಿ, ಕಾರ್ಮಿಕರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಕಾರ್ಮಿಕ ಇಲಾಖೆಯ ಆಯುಕ್ತ ಕೆ.ಶೇಖರ್ ಹೇಳಿದರು.

???????????????????????????????
ಜೆಸಿಐ ಮೂಡುಬಿದಿರೆ ತ್ರಿಭುವನ್, ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆ, ಆಳ್ವಾಸ್ ಹೆಲ್ತ್ ಸೆಂಟರ್, ಪ್ರಸಾದ್ ನೇತ್ರಾಲಯ ಉಡುಪಿ, ಸಿಂಚನ ಸೇವಾ ಟ್ರಸ್ಟ್ ಇದರ ಜಂಟಿ ಸಹಯೋಗದಲ್ಲಿ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ನೇತ್ರ ತಪಾಸಣಾ ಮತ್ತು ಚಿಕಿತ್ಸೆ ಉಚಿತ ಶಿಬಿರ, ಆರೋಗ್ಯ ತಪಾಸಣಾ, ಚಿಕಿತ್ಸೆ ಶಿಬಿರ, ಬೀಡಿ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತು ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೆಸಿಐ ವಲಯ 16ರ ವಲಯಾಧ್ಯಕ್ಷ ರಾಕೇಶ್ ಕುಂಜೂರು ಮುಖ್ಯ ಅತಿಥಿಯಾಗಿ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಸಾಕಷ್ಟು ಘೋಷಣೆಯಾಗುತ್ತಿದೆ. ಅದನ್ನು ಗ್ರಾಮೀಣಮಟ್ಟದಲ್ಲಿರುವ ಕಾರ್ಮಿಕರಿಗೆ ಸಿಗುವ ರೀತಿಯಲ್ಲಿ ಪ್ರಯತ್ನ ಮಾಡಬೇಕು. ಜೆಸಿಐ ಸಮಾಜಮುಖಿ ಕೆಲಸಗಳಿಗೆ ಸದಾ ಕೈಜೋಡಿಸುತ್ತದೆ ಎಂದರು.
ಜೆಸಿಐ ಮೂಡುಬಿದಿರೆ ಅಧ್ಯಕ್ಷೆ ಸಂಗೀತಾ ಎಂ.ಪ್ರಭು ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಜೆಸಿಐ ಕಾರ್ಯಕ್ರಮ ಸಂಯೋಜನಾ ವಿಭಾಗದ ವಲಯ ನಿರ್ದೇಶಕ ಜಯೇಶ್ ಬರೆಟ್ಟೊ, ಕೈಕಂಬ ಬೀಡಿ ಕಾರ್ಮಿಕ ಆಸ್ಪತ್ರೆಯ ಡಾ.ಪಿ ರಾಮಕೃಷ್ಣ ಭಟ್, ಪ್ರಸಾದ್ ನೇತ್ರಾಲಯದ ತಜ್ಞೆ ಡಾ.ಪ್ರಿಯಾ, ಶ್ರೀಸಿಂಚನ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಡಾ.ಮುರಳೀಧರ ವೈ.ಎನ್, ಆಳ್ವಾಸ್ ಹೆಲ್ತ್ ಸೆಂಟರ್‍ನ ಜಿತೇಶ್ಚಂದ್ರ ಮುಖ್ಯ ಅತಿಥಿಯಾಗಿದ್ದರು. ಜೆಸಿಐ ಪೂರ್ವಾಧ್ಯಕ್ಷ ಸಂತೋಷ್ , ಕಾರ್ಯದರ್ಶಿ ರಾಮಕೃಷ್ಣ, ಜ್ಯೂನಿಯರ್ ಜೇಸಿ ಅಧ್ಯಕ್ಷ ಶಶಾಂಕ್ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter