Published On: Wed, Jul 11th, 2018

ಇರಾ ಗ್ರಾಮ ಪಂಚಾಯತ್ 2018_2019ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ

ಇರಾ: ಬಂಟ್ವಾಳ ತಾಲೂಕಿನ ಇರಾ ಗ್ರಾಮ ಪಂಚಾಯತ್ ನ ನ 2018/19 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ದಿನಾಂಕ 11/07/2019 ರಂದು ಮಳೆಯಾಳಿ ಬಿಲ್ಲವ ಸೇವಾ ಸಂಘ (ರಿ) ಸಭಾಭವನದಲ್ಲಿ ಇರಾ ಗ್ರಾಮ ಪಂಚಾಯತ್ ಅದ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸರಕಾರದ ವಿವಿಧ ಇಲಾಖೆಗಳಾದ ಕಂದಾಯ,ಆರೋಗ್ಯ, ಕ್ರಷಿ,ಮೆಸ್ಕಾಂ,ತೋಟಗಾರಿಕೆ,ಶಿಕ್ಷಣ, ಪಶು ಸಂಗೋಪನಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವ್ರದ್ದಿ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಇಲಾಖಾವಾರು ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿದರು.ಗ್ರಾಮದ ಅಭಿವೃದ್ಧಿ ಬಗ್ಗೆ ಗ್ರಾಮಸ್ಥರು ಸಲಹೆ ಸೂಚನೆ ನೀಡಿದರು.

Ira (3)

Ira (2)

Ira (1)

ಕಂದಾಯ ಇಲಾಖೆಯಲ್ಲಿ ಸುಮಾರು ನಲ್ವತ್ತು ವರ್ಷಗಳಿಂದ ಸುದೀರ್ಘ ಪ್ರಾಮಾಣಿಕ ಹಾಗೂ ಪಾರದರ್ಶಕ ಸೇವೆ ಸಲ್ಲಿಸಿ ಇರಾ ಗ್ರಾಮದಲ್ಲಿ ಕಳೆದ ಮೂರು ವರ್ಷ ಸೇವೆ ಸಲ್ಲಿಸಿ ಇದೀಗ ಜುಲೈ 2018 ರಂದು ಸೇವೆಯಿಂದ ನಿವೃತ್ತಿ ಗೋಳ್ಳಲಿರುವ ಗ್ರಾಮ ಕರಣಿಕರಾದ ಎ.ಪಿ ಭಟ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಮತಾ ಡಿ.ಎಸ್ ಗಟ್ಟಿ ಸನ್ಮಾನಿತರ ಗುಣಗಾನಗೈದರು.ನೋಡೆಲ್ ಅಧಿಕಾರಿಯಾಗಿ ಬಂಟ್ವಾಳ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೊಣಯ್ಯ ನಾಯಕ್ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ ಸ್ವಾಗತಿಸಿ. ಸಿಬ್ಬಂದಿ ಶೀಮತಿ ಗುಲಾಬಿ ಧನ್ಯವಾದಗೈದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter