Published On: Wed, Jul 11th, 2018

ದ್ವೀಪದಂತಾದ ಭಂಡಾರಿಬೆಟ್ಟು

ಬಂಟ್ವಾಳ: ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಭಂಡಾರಿ ಬೆಟ್ಟು ವಿನಲ್ಲಿ ಬುಧವಾರ ಕೃತಕ ನೆರೆ ಉಂಟಾಗಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಜನಜೀವನವು ಅಸ್ತವ್ಯಸ್ತಗೊಂಡಿದ್ದು, ಮಳೆಗೆ ನೀರು ಸರಾಗವಾಗಿ ಹರದು ಹೋಗಲು
ಚರಂಡಿ ವ್ಯವಸ್ಥೆ ಇಲ್ಲದೆ ತಗ್ಗು ಪ್ರದೇಶ ಸಹಿತ ಗದ್ದೆಯಲ್ಲಿ ನೀರು ನಿಂತು ವಸ್ತುಶ: ದ್ವೀಪದಂತಾಯಿತು.

IMG_3148 IMG_3151

ಇಲ್ಲಿದ್ದ ಚರಂಡಿಯಲ್ಲಿ ಹೂಳು‌ತುಂಬಿದರಿಂದ ನೀರು ಹರಿಯಲು ತಡೆವುಂಟಾಗಿ ಪಕ್ಕದ ಮನೆ , ಅಂಗಡಿಗೆ ನೀರು ನುಗ್ಗಿದೆ. ಪುರಸಭೆ ಮತ್ತು ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಗ್ಗುಪ್ರದೇಶದಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಅನುಮತಿ‌ನೀಡಿದ್ದು, ಆದರೆ ಈ ಭಾಗದಲ್ಲಿ ಮಳೆ ನೀರು‌ ಸರಾಗವಾಗಿ ಹರಿದು ಹೋಗಲು ಚರಂಡಿಯ ವ್ಯವಸ್ಥೆ ಇಲ್ಲ. ಪರಿಣಾಮ ಮಳೆಗಾಲದಲ್ಲಿ ನೀರು ಹರಿಯಲು ಜಾಗವಿಲ್ಲದೆ ಕೃತಕ ನೆರೆ ಉಂಟಾಗಿ ಸಮಸ್ಯೆಉದ್ಭವವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸುದ್ದಿ ತಿಳಿದ ಪ್ರಭಾರ ತಹಶೀಲ್ದಾರ್ ಸಂತೋಷ್ ಜಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ನವೀನ್ ಬೆಂಜನಪದವು , ಪುರಸಭೆಯ ಅಧ್ಯಕ್ಷ ರಾಮಕ್ರಷ್ಞ ಆಳ್ವ, ಪುರಸಭಾ ಸದಸ್ಯರಾದ ಜಗದೀಶ ಕುಂದರ್ , ದೇವದಾಸ ಶೆಟ್ಟಿ, ಗಂಗಾದರ್ ಇಂಜಿನಿಯರ್ ಡೊಮೆನಿಕ್ ಡಿ ಮಿಲ್ಲೋ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೇಕಾರ್ ಸಿಬ್ಬಂದಿ ಸದಾಶಿವ ಕೈಕಂಬ .ಶಿವ ಪ್ರಸಾದ‬ ಬಂಟ್ವಾಳ, ಅಗ್ನಿ ಶಾಮಕ ದಳ ಸ್ಥಳದಲ್ಲಿ ದ್ದು ಮುನ್ನಚ್ಚರಿಕಾ ಕ್ರಮಗಳನ್ಮು ಕೈಗೊಂರರು. ಊರು ಕೊಳ್ಳ ಹೊಡದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಪುರಸಭೆ ಬೇಸಿಗೆಯಲ್ಲಿ ಚರಂಡಿ ತೆಗೆಯವುದು, ಹೂಳು ತೆಗೆಯುವ ಕೆಲಸ ಮಾಡಲಿಲ್ಲ.ಈಗ ಮಳೆ ನೀರಿನಿಂದ ಮನೆಗೆ ನೀರು ನುಗ್ಗಿದ ಮೇಲೆ ಚರಂಡಿ ಹೂಳೆತ್ತಲು,ಚರಂಡಿ ತೋಡುವ ಕೆಲಸ ಆರಂಭಿಸಿದೆ. ಭಂಡಾರಿಬೆಟ್ಟು ವಿನಲ್ಲಿ ಮಳೆ ನೀರು ಹರಿಯಲು ತೋಡಿದ್ದರೂ, ಇದನ್ನು ಸಂಪರ್ಕಿಸುವ ಚರಂಡಿ ಬ್ಲಾಕ್ ಅಗಿದ್ದು ,ಅದನ್ನು ತೆರವುಗೊಳಿಸಿ ನೀರು ಮುಖ್ಯ ತೋಡು ಸೇರುವಂತೆ ವ್ಯವಸ್ಥೆ ಮಾಡಲಾಯಿತು.ಬಿ.ಸಿ.ರೋಡಿನಲ್ಲೂ ಪೆಟ್ರೋಲ್ ಪಂಪೊಂದರ ಬಳಿ ಚರಂಡಿ ಬ್ಲಾಕ್ ಆಗಿ ಪೆಟ್ರೋಲ್ ಪಂಪ್ ಹಾಗೂ ಅಕ್ಕಪಕ್ಕದ ಮನೆಗೆ ನೀರು ನುಗ್ಗಿತ್ತು.

7 ಕಂಬಕ್ಕೆ ಹಾನಿ : ಕಳ್ಳಿಗೆ ,ಪಚ್ಚಿನಡ್ಕ, ಅಗ್ರಾರ್ ಸೇರಿದಂತೆ ವಿವಿಧ ಭಾಗಗಳಲ್ಲಿ ಗಾಳಿ,ಮಳೆಗೆ ಮರಗಳು ಬಿದ್ದು,ವಿದ್ಯುತ್ ಕಂಬಗಳು ಕೂಡ ಧರಶಾಹಿಯಾಗಿದೆ. ಕೆಲವೆಡ ಗುಡ್ಡ ಜರಿದಿರುವುದು,ಮರಗಳು ಉರುಳಿರುವ ಬಗ್ಗೆಯೂ ತಿಳಿದುಬಂದಿದೆ. ಮನೆಗೆ ಹಾನಿ; ಪುದು ಗ್ರಾಮದ ಸುಜೀರುಗುಡ್ಡೆ ಎಂಬಲ್ಲಿ ಗಾಳಿ,ಮಳೆಗೆ ಝರೀನಾ ಎಂಬವರ ಮನೆ ಹಂಚು ಹಾರಿಹೋಗಿದ್ದು,ಗೋಡೆ ಕುಸಿದಿದೆ ಸುಮಾರು 25 ಸಾವಿರ ನಷ್ಟವುಂಟಾಗಿದೆ. ಸರಪಾಡಿಯ ಉಜಿರಾಡಿ ಎಂಬಲ್ಲಿ ಐತಪ್ಪ ಪೂಜಾರಿಯವರ ಮನೆಯ ಹಿಂಭಾಗ ಗುಡ್ಡ ಜರಿದಿದ್ದು, ಇದರಲ್ಲಿರುವ ವಿದ್ಯುತ್
ಕಂಬ ಅಪಾಯದಲ್ಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter