Published On: Sun, Jul 8th, 2018

ಕರಾವಳಿಯಲ್ಲಿ ಉಕ್ಕಿ ಹರಿದ ಶಾಂಭವಿ , ನಂದಿನಿ ನದಿ. ಜಲಾವೃತಗೊಂಡಿದೆ ಕೃಷಿಭೂಮಿ

ಕಿನ್ನಿಗೋಳಿ :ಶುಕ್ರವಾರ ಸುರಿದ ಬಾರೀ ಮಳೆಗೆ ಶಾಂಭವಿ ಮತ್ತು ನಂದಿನಿ ನದಿ ಉಕ್ಕಿ ಹರಿಯುತ್ತಿದೆ, ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 50 ಎಕ್ಕರೆ ಕೃಷಿ ಭೂಮಿ ಮುಳಗಡೆಯಾಗಿ ನಷ್ಟ ಸಂಭವಿಸಿದೆ, ರಾಜ್ಯ ಹೆದ್ದಾರಿಯ ಸಂಕಲಕರಿಯ ಪಟ್ಟೆ ಕ್ರಾಸ್ ಮುಖ್ಯ ರಸ್ತೆಯಿಂದ ಒಳಗಿನ ಪಟ್ಟೆ ಜಾರಾಂದಾಯ ದೈವಸ್ಥಾನ ಹಾಗೂ ಶುಂಠಿಪಾಡಿ ಗೆ ಹೋಗುವ ರಸ್ತೆ ಮುಳುಗಡೆಯಾಗಿದೆ. ನವೀನ್ ಮತ್ತು ಸುರೇಶ್ ಅವರಿಗೆ ಸೇರಿದ ಬೇಕರಿ ತಯಾರಿಕಾ ಘಟಕದ ಒಳಗೆ ನೀರು ಹೋಗಿದ್ದು ಎರಡು ಜನರೇಟರ್ ಮತ್ತು ಅಂಗಡಿಗಳು ಮಳುಗಡೆಯಾಗಿದೆ.kinni nere (3)
ಉಳೆಪಾಡಿಯಲ್ಲಿ ಉಮಾಮಹೇಶ್ವರಿ ದೇವಳದ ಬಳಿಯ ರತ್ನಾಕರ ಶೆಟ್ಟಿ ಹಾಗೂ ಸುಧಾಕರ ಶೆಟ್ಟಿ ಮನೆಗಳು ಜಲಾವೃತವಾಗಿದ್ದು ಎರಡು ಕುಟುಂಬದವರನ್ನು ದೋಣಿಯ ಮೂಲಕ ಕ್ಲಬ್‍ನ ಸದಸ್ಯರು ಹಾಗೂ ಸ್ಥಳೀಯರು ಸ್ಥಳಾಂತರ ಮಾಡಿದರು.ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಬೈಲು ಗಣಪತಿ ಉಡುಪ, ಉಮೇಶ್ ದೇವಾಡಿಗ, ಜನಾರ್ದನ ಉಡುಪ, ರವಿ ದೇವಾಡಿಗ ಅವರ ಮನೆ ಜಲಾವೃತಗೊಂಡಿದೆ. ಅವರನ್ನು ಸ್ಥಳಾಂತರ ಮಾಡಲಾಗಿದೆ.kinni nere (5)

ಪಂಜ ಕೊಯಿಕುಡೆ, ಉಲ್ಯ, ಮೊಗಪಾಡಿ, ಬೈಲಗುತ್ತು, ಕುದ್ರು ಪ್ರದೇಶಗಳು ಜಲಾವೃತ ಗೊಂಡು ಸುಮಾರು 70 ಮನೆಗಳ ಜಲವೃತವಾಗಿದೆ. ಶೋಭಾ ಸೀತಾರಾಮ ಪೂಜಾರಿ, ಗಂಗಾ ಪೂಜಾರಿ ಲಕ್ಷಣ ಪೂಜಾರಿ, ರಾಜು ಪೂಜಾರಿ ಅವರ ಮನೆ ಜಲಾವೃತಗೊಂಡಿದೆ. ಕಟೀಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಲೆಂಜೂರು ಪ್ರದೇಶದಲ್ಲಿಯೂ ನೆರೆ ಆವರಿಸಿದ್ದು, ರಾಘು ಕರ್ಕೇರ, ದೇವಕಿ ಕಡಪು, ಕೋಟಿ ದೇವಾಡಿಗ, ಬಾಬು ದೇವಾಡಿಗ, ಮೋನಪ್ಪ ಮೂಲ್ಯ, ಪುರಂದರ ದೇವಾಡಿಗ ಗೋವರ್ದನ ಮೂಲ್ಯ, ಗೋವಿಂದ ಪೂಜಾರಿ ವೆಂಕಪ್ಪ ಪೂಜಾರಿ ಅವರ ಮನೆ ಜಲಾವೃತವಾಗಿದೆ. ಕಿಲೆಂಜೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದ್ದು ಕೆಲವರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಕಟೀಲಿನ ಮಿತ್ತಬೈಲ್ ನಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈಶ್ವರ್ ಕಟೀಲು, ಅಭಿಲಾಷ್ ಶೆಟ್ಟಿ ಕಟೀಲು ಮತ್ತಿತರರು ಎರಡು ಮನೆಯವರನ್ನು ಸ್ಥಳಾಂತರಿಸಿದ್ದು, ದನಕರುಗಳನ್ನು ಸ್ಥಳೀಯ ದೈವಸ್ಥಾನಕ್ಕೆ ತರಲಾಗಿದೆ.kinni nere (6)

kinni nere (4)
ಜಲಾವೃತಗೊಂಡ ಪ್ರದೇಶಕ್ಕೆ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೂಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್ ರೂಡ್ಕರ್, ಗ್ರಾಮಕರಣಿಕರಾದ ಪ್ರದೀಪ್ ಶಣೈ, ಕಿರಣ್, ಸಂತೋಷ್, ಮಂಜುನಾಥ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು, ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ, ರಶ್ಮೀ ಆಚಾರ್ಯ, ಶುಭಲತಾ ಶೆಟ್ಟಿ. ಶರತ್ ಕುಬೆವೂರು, ಐಕಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಚೌಟ, ಬಳ್ಕುಂಜೆ ಗ್ರಾ.ಪಂ. ಅಧ್ಯಕ್ಷ ದಿನೇಶ್ ಪುತ್ರನ್, ಕೆಮ್ರಾಲ್ ನಾಗೇಶ್ ಬೋಳ್ಳೂರು, ಕಟೀಲು ಗ್ರಾಪಂ. ಗೀತಾ ಪೂಜಾರ್ತಿ, ಕಿರಣ್ ಕುಮಾರ್ ಶೆಟ್ಟಿ, ರಮಾನಂದ ಪೂಜಾರಿ, ಜನಾರ್ದನ ಕಿಲೆಂಜೂರು, ತಿಲಕ್ ರಾಜ್ ಶೆಟ್ಟಿ ಮತ್ತಿತರರು ಭೇಟಿ ನೀಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter