ಅಡ್ಡೂರು ಸೆಂಟ್ರಲ್ ಕಮಿಟಿ ದಮ್ಮಾಮ್ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
ದಮ್ಮಾಮ್: ಅಡ್ಡೂರು ಸೆಂಟ್ರಲ್ ಕಮಿಟಿ ಇದರ ದಮ್ಮಾಮ್ ಯುನಿಟಿಯ ವಾರ್ಷಿಕ ಮಹಾಸಭೆ ಶುಕ್ರವಾರ ಇಲ್ಲಿನ ಮ೦ಜೊಟ್ಟಿ ರೂಮ್ ನಲ್ಲಿ ನಡೆಯಿತು.
ಈ ವೇಳೆ 2018-19ನೇ ಸಾಲಿನ ನೂತನ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ರಝಾಕ್ ಮ೦ಜೊಟ್ಟಿ, ಉಪಾಧ್ಯಕ್ಷರಾಗಿ ಮನ್ಸೂರ್ ತೋಕೂರ್, ಕಾರ್ಯದರ್ಶಿಯಾಗಿ ಸಂಶುದ್ದೀನ್ ಕೋಡಿಬೆಟ್ಟು, ಖಜಾ೦ಚಿಯಾಗಿ ಖಾಸಿಮ್ ಎ.ಕೆ., ಜತೆ ಕಾರ್ಯದರ್ಶಿಯಾಗಿ ಮಜೀದ್ ಪೊನ್ನೆಲ, ಕಮರುದ್ದೀನ್ , ಲೆಕ್ಕಪರಿಶೋಧಕರಾಗಿ ಜಮಾಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಸ್ಮಾಯೀಲ್ ಎ.ಪಿ., ಜಮಾಲ್ ಶರೀಫ್ ಎಸ್.ಎಚ್.ಎ ಅವರನ್ನು ಆಯ್ಕೆ ಮಾಡಲಾಯಿತು.