Published On: Thu, Jun 14th, 2018

ಶ್ರೀನಿವಾಸಪುರ: ಉಚಿತ ಬಸ್‍ಪಾಸ್‍ ನೀಡುವಂತೆ  ಒತ್ತಾಯಿಸಿ ಎಬಿವಿಪಿ ಧರಣಿ

14 Svpur Ph-1

 

ಶ್ರೀನಿವಾಸಪುರ: ರಾಜ್ಯದ ಎಲ್ಲಾ ಬಡ  ಪ್ರತಿಭಾವಂತ ವೀದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವಿತರಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ವತಿಯಿಂದ ಗುರುವಾರ ತಾಲೂಕು ಕಚೇರಿ ಮುಂದೆ ಧರಣಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಧರಣಿನಿರತರರು, ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ 2018-19ನೇ ಸಾಲಿನ ವಾರ್ಷಿಕ ಬಜೆಟ್ಟಿನಲ್ಲಿ ಎಸ್ಸಿ ಹಾಗು ಎಸ್ಟಿ ಸೇರಿದಂತೆ ರಾಜ್ಯದ ಎಲ್ಲಾ ವಿಧ್ಯಾಥಿಗಳೀಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆಯನ್ನು ಮಾಡಲಾಗಿತ್ತು. ಆದರೆ ಇಂದಿನ ರಾಜ್ಯ ಸರ್ಕಾರ ಎಸ್ಸಿ ಜಹಾಗು ಎಸ್ಟಿ ವಿಧ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ಬಸ್ ಪಸ್ ನೀಡಿದೆ ಇದರಿಂದ ಉಳಿದ ವಿಧ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ರಾಜ್ಯದ ಪ್ರಸಕ್ತ ವರ್ಷದಲ್ಲಿ 22ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳು ಬಸ್‍ಪಾಸ್‍ಗಾಗಿ ಅಜಿ ಸಲ್ಲಿಸುವರಾಗಿದ್ದಾರೆ. ಆದರೆ ಹಿಂದಿನರಾಜ್ಯ ಸರ್ಕಾರ ಅಂದಿನ ಅಂಕಿ-ಅಂಶಗಳ ಪ್ರಕಾರ 19.60ಲಕ್ಷ  ವಿದ್ಯಾರ್ಥಿಗಳೀಗೆ 836.96ಕೋಟಿ ರೂ. ಅನುದಾನವನ್ನು ಮಾತ್ರ ಬಿಡುಗಡೆಗೊಳಿಸಿದೆ. ಆದರೆ ಇಂದಿನ ಅಂಕಿ ಅಂಶಗಳ ಪ್ರಕಾರ ಪ್ರಕಾರ ಹೆಚ್ಚುವರಿಯಾಗಿ 629.32 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಬೇಕಿದೆ ಈ ವಿಷಯಕ್ಕೆ ಸಂಬಂದಿಸಿದಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ರಾಜ್ಯದ ಹಣಕಾಸು ಇಲಾಖೆ ಪತ್ರದ ಮೂಲಕ ಅನುದಾನವನ್ನು ಕೇಳಲಾಗಿ ಹಣಕಾಸು ಇಲಾಖೆ ಅದನ್ನು ನಿರಾಕರಿಸಿದೆ ಎಂದರು.

ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಈಗಾಗಲೇ ಉಚಿತ ಬಸ್‍ಪಾಸ್‍ಗಾಗಿ ರಾಜ್ಯಾಧ್ಯಂತ ಹೋರಾಟವನ್ನು ನಡೆಸಿ ರಾಜ್ಯದ ಶಿಕ್ಷಣ, ಹಣಕಾಸು ಮತ್ತು ಸಾರಿಗೆ ಇಲಖೆಗಳ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಗಿದೆ ಎಂದರು. ಆದರೂ ಇಲ್ಲಿಯವರಿಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ರಾಜ್ಯಾಧ್ಯಂತ ಜೂನ್ 7ರಿಂದ ಬಸ್‍ಪಾಸ್‍ಗಳನ್ನು ನೀಡುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೆ ಮದಯ ಪ್ರವೆಶಿಸಿ ರಾಜ್ಯದ ಎಲ್ಲಾ ಬಡ ವಿಧ್ಯಾರ್ಥಿಗಳಿಗೆ ಉಚಿತ ಬಸ್ ನೀಡಬೇಕೆಂದು ಈಮೂಲಕ ಆಗ್ರಹಿಸಿದ್ದಾರೆ.

ಅದೇ ರೀತಿ ಕರ್ನಾಟಕ ರಾಜ್ಯ ಸರ್ಕಾರ ಸರಿಗೆ ಸಚಿವರಿಗೆ  ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎನ್.ಎಸ್.ಪ್ರಶಾಂತ್ ರವರಿಗೆ ಮುಕಂಡರು ಸಲ್ಲಿಸಿದರು.

ಧರಣಿಯಲ್ಲಿ ರಜ್ಯ ಕಾರ್ಯಕಾರಣಿ ಸದಸ್ಯ ಕೆ.ಆರ್.ಕಲ್ಯಾಣ್‍ಕುಮಾರ್, ಕೆ.ಹೆಚ್.ನವೀನ್, ಎನ್.ಗೋವರ್ಧನ್, ಎನ್. ಹರಿಕೃಷ್ಣ,  ಅರುಣ, ಮನೋಜ್, ಶ್ರೀಕಲಾ, ಅನುಷಾ, ಪಲ್ಲವಿ ಇತರರು ಉಪಸ್ಥಿತರಿದ್ದರು.

 

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter