Published On: Thu, Jun 14th, 2018

ಗುರುಪುರ ಸೇತುವೆ ಬಳಿ ಮತ್ತೆ ಮುರಿದು ತಾತ್ಕಾಲಿಕ ತಡೆಗೋಡೆ

ಕೈಕಂಬ : ಗುರುಪುರ ನದಿ ಸೇತುವೆಯ ಒಂದು ಕೊನೆಯಲ್ಲಿ ವಾಹನ ಅಪಘಾತದಿಂದ ಸೇತುವೆ ತಡೆಗೋಡೆ ಜರ್ಜರಿತಗೊಂಡಿದ್ದು, ಕಳೆದ ವಾರವಷ್ಟೇ ಇಲ್ಲಿ ಪಿಡಬ್ಲ್ಯೂಡಿ ಮರದ ಬೇಲಿ ಹಾಕಿ ಕೆಂಪು ಪಟ್ಟಿ ಕಟ್ಟಿ ತನ್ನ ಕೆಲಸ ಮುಗಿಸಿತ್ತು. ಆದರೆ ಜೂನ್ 14ರಂದು ಇದೇ ಜಾಗದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಮರದ ಬೇಲಿ ನುಜ್ಜುಗುಜ್ಜಾಗಿದೆ.14vpgur1

ತಡೆಗೋಡೆ ಕುಸಿದ ಜಾಗದಲ್ಲಿ ದುರಸ್ತಿ ಕಾಮಗಾರಿ ನಡೆಸುವ ಬದಲಾಗಿ ಅವೈಜ್ಞಾನಿಕ ರೀತಿಯಲ್ಲಿ ಮರದ ಬೇಲಿ ಹಾಕಲಾಗಿದೆ. ಬೇಲಿ ಕುಸಿದಿರುವ ಜಾಗದಿಂದ ನದಿ ಅತಿ ಹತ್ತಿರದಲ್ಲಿದ್ದು, ಕೆಳಗಡೆ ಮಣ್ಣು ಜರಿದಿದೆ. ನದಿಯಲ್ಲಿ ಈಗ ನೀರೂ ಹೆಚ್ಚಾಗಿದೆ. ಆದ್ದರಿಂದ ಇದೀಗ ಈ ಜಾಗ ವಾಹನ ಅಪಾಯಕ್ಕೆ ಆಹ್ವಾನ ನೀಡಿದಂತಿದೆ.14vpguru3

ಮರದ ಬೇಲಿ ಮುರಿದು ಹೋದ ಮತ್ತು ಅಲ್ಲೇ ಮಣ್ಣು ಕುಸಿತ ಸಂಭವಿಸಿ ಬಗ್ಗೆ ಸ್ಥಳೀಯರು ತೀವ್ರ ಆತಂಕಿತರಾಗಿದ್ದಾರೆ. ಠಾಣೆಗೆ ಬಂದ ದೂರೊಂದಕ್ಕೆ ತಕ್ಷಣ ಸ್ಪಂದಿಸಿದ ಬಜ್ಪೆ ಎಸ್‍ಐ ಪರಶಿವಮೂರ್ತಿ ಹಾಗೂ ಅವರ ತಂಡ ಸೇತುವೆ ಬಳಿಗೆ ಆಗಮಿಸಿ ಪರಿಶೀಲನೆ ನಡೆಸಿತು.
14vpguru4
“ಇಲ್ಲಿ ದುರಸ್ತಿ ಕಾಮಗಾರಿ ನಡೆಸದೆ, ಇಂತಹ ಬೇಲಿ ಅಳವಡಿಸಿರುವುದರಲ್ಲಿ ಅರ್ಥವಿಲ್ಲ. ಅಪಘಾತ ಸಂಭವಿಸುವ ಮುಂಚೆ ಕ್ರಮ ಜರುಗಿಸಬೇಕು” ಎಂದು ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ(ಎನ್‍ಎಚ್) ಸಹಾಯಕ ಇಂಜಿನಿಯರ್ ಮುರುಗೇಶರಲ್ಲಿ ಬಜ್ಪೆ ಠಾಣಾಧಿಕಾರಿ ಹೇಳಿದರು.

``ರಾಷ್ಟ್ರೀಯ ಹೆದ್ದಾರಿಗೆ(169) ಇಂತಹ ಬೇಲಿ ಶೋಭೆಯಲ್ಲ. ಇದನ್ನಿಲ್ಲಿ ನಿರ್ಮಿಸಿದ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಅಪಾಯಕಾರಿ ಜಾಗವಾದ ಇಲ್ಲಿ ಶೀಘ್ರ ತಡೆಗೋಡೆ ನಿರ್ಮಿಸಲು ಪ್ರಯತ್ನಿಸುವೆ” ಎಂದು ಮುರುಗೇಶ್ ತಿಳಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter