Published On: Thu, Jun 14th, 2018

ಕೃತಕವಾಗಿ ತಯಾರಿಸಲು ಸಾಧ್ಯವಾಗದ ವಸ್ತು “ರಕ್ತ”

Blood-Donor-Day

ಪ್ರತಿ ವರ್ಷದ ಜೂ. 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಅದರಂತೆ ಅ ದಿನದಂದು ಹಲವಾರು ಜನ ಸ್ವಯಂ ಪ್ರೇರಿತ ರಕ್ತದಾನ ಮಾಡುತ್ತಾರೆ.ರಕ್ತಕ್ಕೆ ಯಾವುದೇ ಜಾತಿ ಧರ್ಮದ ವಿಂಗಡಣೆ ಇಲ್ಲ ಅದು ಯಾವುದೇ ಧರ್ಮದ ವ್ಯಕ್ತಿಗೂ ನೀಡಬಹುದು.

ವಿಶ್ವದಾದ್ಯಂತ ಅನೇಕ ಮಂದಿಗೆ ರಕ್ತದ ಅವಶ್ಯಕತೆ ಇದೆ. ಅಪಘಾತ, ಅವಘಡ ಸಂಭವಿಸಿದಾಗ, ವಿವಿಧ ಕಾಯಿಲೆಯಿಂದ ಬಳಲುತ್ತಿರುವಾಗ 1 ಯುನಿಟ್ ರಕ್ತಕ್ಕಾಗಿ ಪರದಾಡುವ ಅನೇಕ ಘಟನೆಗಳು ನಡೆದಿರುತ್ತದೆ. ನಾವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್‌ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು. ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದು. ಆದ್ದರಿಂದ ವಿಶ್ವ ರಕ್ತದಾನಿಗಳ ದಿನವನ್ನು ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕಾದ ಅಗತ್ಯವಿದೆ.

ರಕ್ತ ದಾನಿಗಳ ದಿನದ ಹಿನ್ನೆಲೆ: ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ 14ರಂದು ” ವಿಶ್ವ ರಕ್ತ ದಾನಿಗಳ ದಿನ ” ವನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ 2004ರಲ್ಲಿ ಈ ಆಚರಣೆ ಆರಂಭವಾಯಿತು. ರಕ್ತ ವರ್ಗಾವಣಾ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೀನರ್ ಅವರ ಜನ್ಮದಿನದ ನೆನಪಿಗಾಗಿ ಈ ಆಚರಣೆ. ಈತ ರಕ್ತವನ್ನು ಎ, ಬಿ, ಎಬಿ ಮತ್ತು ಒ ಎಂಬ ಗುಂಪುಗಳನ್ನಾಗಿ ವಿಂಗಡಿಸುವ ಬಗೆಯನ್ನು ಕಂಡು ಹಿಡಿದರು. ಇಂದಿಗೂ ರಕ್ತವನ್ನು ಈ ಬಗೆಯಲ್ಲಿಯೇ ವಿಂಗಡಿಸಲಾಗುತ್ತಿದೆ.

ಈ ಆಚರಣೆಯ ಮುಖ್ಯ ಧ್ಯೇಯ: ಸ್ವಯಂಪ್ರೇರಿತ ರಕ್ತದಾನದ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದು ಈ ಆಚರಣೆಯ ಮುಖ್ಯ ಧ್ಯೇಯ. ಅದರ ಜೊತೆಯಲ್ಲಿಯೇ ಸ್ವಯಂಪ್ರೇರಿತ ರಕ್ತದಾನಿಗಳನ್ನು ಅಭಿನಂದಿಸುವುದು, ಎಲ್ಲ ಆರೋಗ್ಯವಂತರನ್ನೂ ಸ್ವಯಂಪ್ರೇರಿತ ರಕ್ತದಾನಕ್ಕೆ ಪ್ರೋತ್ಸಾಹಿಸುವುದು ಈ ಆಚರಣೆಯ ಅಭಿಯಾನದಲ್ಲಿ ಪ್ರಮುಖವಾಗಿವೆ. ವಿಶ್ವದ ಅರ್ಧದಷ್ಟು ರಾಷ್ಟ್ರಗಳಲ್ಲಿ ರಕ್ತದ ಕೊರತೆ ಇದೆ. ಈ ಕೊರತೆಯನ್ನು ನೀಗಿಸುವುದು ಈ ರಕ್ತದಾನ ದಿನದ ಆಚರಣೆಯ ಬಹು ಮುಖ್ಯ ಉದ್ದೇಶ.

ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. ರಕ್ತವನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ. ಹಾಗಾಗಿ ತುರ್ತು ಪರಿಸ್ಥಿತಿಗಳಲ್ಲಿ ದಾನಿಯಿಂದ ಸ್ವೀಕರಿಸಿದ ರಕ್ತವಷ್ಟೇ ರೋಗಿಯ ಜೀವ ಉಳಿಸಲು ಸಾಧ್ಯ. ಪ್ರತಿಯೊಬ್ಬರು ಯಾವುದೇ ಜಾತಿ ಭೇಧ ಭಾವ ಇಲ್ಲದೆ ಒಂದು ಜೀವ ಉಳಿಸುವ ನಿಟ್ಟಿನಲ್ಲಿ ಸ್ವಯಂ ರಕ್ತದಾನಕ್ಕೆ ಮುಂದಾಗಬೇಕು.ನಾವು ನೀಡುವ ಒಂದು ಯುನಿಟ್ ರಕ್ತದಿಂದ ಮೂರು ಜೀವ ಉಳಿಸಬಹುದು ಇದಕ್ಕಿಂತ ದೊಡ್ಡದಾದ ಮಾನವೀಯತೆ , ಸಮಾಜ ಸೇವೆ ಯಾವುದು ಇಲ್ಲ.

ಭಾರತ ದೇಶದಲ್ಲಿ ದಿನದಂದ ದಿನಕ್ಕೆ ರಕ್ತದ ಬೇಡಿಕೆ ಹೆಚ್ಚಗುತ್ತಾ ಇದ್ದು ಅದರಲ್ಲೂ ಕರ್ನಾಟಕದಲ್ಲಿ ರಕ್ತದ ಬೇಡಿಕೆ ಅಧಿಕವಾಗುತ್ತಿದೆ. ಕರ್ನಾಟಕದ ದ.ಕ ಜಿಲ್ಲೆ , ಉಡುಪಿ , ಮಣೆಪಾಲದಲ್ಲಿ ರಕ್ತದ ಬೇಡಿಕೆ ಅಧಿಕವಾಗಿದೆ , ದೇಶದ ವಿವಿಧ ರಾಜ್ಯಗಳ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ದ.ಕ ಹಾಗೂ ಉಡುಪಿ ಮಣೆಪಾಲಕ್ಕೆ ಬರುತ್ತಿದ್ದು ಇದರಿಂದ ರಕ್ತದ ಬೇಡಿಕೆ ಅಧಿಕವಾಗಿದೆ.ಆದ್ದರಿಂದ ಪ್ರತಿಯೊಂದು ಸಂಘ ಸಂಸ್ಥೆಗಳು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಕ್ತದ ಪೂರೈಕೆಗೆ ಹೆಚ್ಚು ಒತ್ತು ನೀಡಬೇಕಾಗಿದೆ.

ತುರ್ತು ಸಂಧರ್ಭದಲ್ಲಿ ಕರ್ನಾಟಕದ ದ.ಕ ಜಿಲ್ಲೆ ಉಡುಪಿ ಜಿಲ್ಲೆ ಹಾಗೂ ಇತರ ಜಿಲ್ಲೆಗಳಲ್ಲಿ ರಕ್ತದಾನ ಮಾಡಲು ಇಚ್ಚಿಸುವವರು BloodhelplineKarnataka.com ವೆಬ್ ಸೈಟ್ ಮೂಲಕ ಸಂಪರ್ಕಿಸಬಹುದು ಅಥವಾ ಕಮೆಂಟ್ ಮಾಡುವ ಮೂಲಕ ನಿಮ್ಮ ಮೊಬೈಲ್ ನಂಬರ್ ಹಾಗೂ ನಿಮ್ಮ ಊರು ನಮಗೆ ತಿಳಿಸಬಹುದು.

ರಕ್ತದಾನ ಮಾಡಿ ಜೀವ ಉಳಿಸಿ , ಎಲ್ಲರಿಗೂ ವಿಶ್ವ ರಕ್ತದಾನಿಗಳ ದಿನದ ಶುಭಾಶಯಗಳು.

-ಇರ್ಝಾನ್ ಅಡ್ಡೂರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter