Published On: Wed, Jun 13th, 2018

ಶ್ರೀನಿವಾಸಪುರ: ಹಾಲು ಉತ್ಪಾದಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ

13 Svpur Ph-1

ಶ್ರೀನಿವಾಸಪುರ: ಹಾಲು ಉತ್ಪಾದಕ ಸಂಘಗಳ ಮಕ್ಕಳ ವಿಧ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಹಾಲು ಒಕ್ಕೂಟ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಜತೆ ಪ್ರತೀ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನಿರ್ದೇಶಕ ಎಂ. ಬೈರಾರೆಡ್ಡಿ ಕರೆ ನೀಡಿದ್ದಾರೆ.

ನಗರದ ಹಾಲು ಒಕ್ಕೂಟ ಶಿಬಿರ ಕಚೇರಿಯಲ್ಲಿ ಬುಧವಾರ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಕ್ಷೇಮಾಭಿವೃದ್ಧಿ ದತ್ತಿ ನಿದಿಯಿಂದ 18 ಮಂದಿ ವಿಧ್ಯಾರ್ಥಿಗಳಿಗೆ 1.5 ಲಕ್ಷ ರೂ ವಿದ್ಯಾರ್ಥಿ ವೇತನ ಹಾಗೂ ಹಸು ವಿಮೆ ಮಾಡಿದ 5 ಮಂದಿ ಫಲಾನುಭವಿಗಳಿಗೆ ತಲಾ 60 ಸಾವಿರ ರೂ.ನಂತೆ 3 ಲಕ್ಷ ರೂ.ಗಳ ಚೆಕ್ಕುಗಳನ್ನು ವಿತರಿಸಿ ಬಳಿಕ ಅವರು ಮಾತನಾಡಿದರು.

ಪ್ರತಿ ವರ್ಷ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಲು ಉತ್ಪಾದಕ ಸಂಘಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ 30 ಲಕ್ಷ ರೂ.ಗಳನ್ನು ನೀಡಲಾಗುತ್ತಿದ್ದು, ಕಳೆದ 4 ವರ್ಷಗಳಿಂದ ನಮ್ಮ ಆಡಳಿತ ಮಂಡಳಿ ಇದನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಹಾಲು ಉತ್ಪಾದಕರು ಯಶಸ್ವಿನಿ ಯೋಜನೆ ಹಾಗು ಕೋಮಲ್ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಆಯಾ ಕಾಲಕ್ಕೆ ಶಿಬಿರ ಕಚೇರಿಯಲ್ಲಿ ದೊರಕಬಹುದಾದ ಸವಲತ್ತುಗಳನ್ನು ಬಳಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎಂದು ಸಲಹೆ ನಿಡಿದರು.

ಉಪ ವ್ಯವಸ್ಥಾಪಕ ಬಿ.ಶಿವರಾಜ್ ರವರು ಮಾತನಾಡಿ, ಹಾಲು ಉತ್ಪಾದಕ ಸಂಘಗಳ ಉತ್ಪಾದಕರಿಗೆ ಹಾಗೂ ಅವರ ಮಕ್ಕಳಿಗೆ ಒಕ್ಕೂಟ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ವಿಧ್ಯಾರ್ಥಿ ವೇತನವನ್ನು ಎಸ್‍ಎಸ್‍ಎಲ್‍ಸಿ, ಪಿಯುಸಿ ಮೇಲ್ಪಟ್ಟು ಎಲ್ಲಾ ಹಂತಗಳ ವಿದ್ಯಾಭ್ಯಾಸಕ್ಕೆ ಹಾಗು ಎಂಬಿಬಿಎಸ್, ಕೆಎಎಸ್ ಇತರೆ ಉನ್ನತ ವ್ಯಾಸಂಕ್ಕೆ  ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಆದ್ದರಿಂದ ಹಾಲು ಉತ್ಪಾದಕರು ಪ್ರತಿ ವರ್ಷ ಅರ್ಜಿಗಳನ್ನು ಸಲ್ಲಿಸಬಹುದು ಇದರಲ್ಲಿ ಅತಿ ಹೆಚ್ಚು ಅಂಕ ಪಡೆದ ಬಾಲಕಿಯರು ಹಾಗು ಬಾಲಕರನ್ನು ಸಮವಾಗಿ ಆಯ್ಕೆ ಮಾಡಿಕೊಂಡು ಅವರಿಗೆ ವಿಧ್ಯಾರ್ಥಿ ವೇತನ ನೀಡಲಾಗುತ್ತದೆ ಎಂದರು.

ಹಾಲು ಉತ್ಪಾದಕ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ್‍ಗೌಡ ಮಾತನಾಡಿ, ಒಕ್ಕೂಟ ನೀಡುವ ಸೌಲಭ್ಯಗಳನ್ನು ಪಡೆಯುವಲ್ಲಿ ಹಾಲು ಉತ್ಪಾದಕರು ಮುಂದಾಗಿ ತಮ್ಮ ಮಕ್ಕಳಿಗೆ ಸಿಗುವ ವಿದ್ಯಾರ್ಥಿ ವೇತನಕ್ಕೆ ತಾವು ಕಚೇರಿಯಲ್ಲಿ ಸಂಪರ್ಕಿಸಿ ಅರ್ಜಿಗಳನ್ನು ಸಲ್ಲಿಸಿ ಕಚೇರಿಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಯದುಪತಿ, ನರಸಿಂಹಯ್ಯ, ಎಂ.ಜಿ.ಶ್ರೀನಿವಾಸ್, ಎಸ್.ಡಿ.ನಾರಾಯಣಸ್ವಾಮಿ, ನರಸಿಂಹರಾಜು, ಅಶ್ರಪ್‍ಅಹಮದ್ ಇತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter