Published On: Wed, Jun 13th, 2018

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಜಾಗೃತಿ: ಎನ್.ಎಸ್.ಮಮದಾಪರ

IMG-20180612-WA0008

ಕೋಲಾರ: ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಕೇವಲ ಸರ್ಕಾರ ಅಥವಾ ಇಲಾಖೆಯು ಆಚರಿಸಿದರೆ ಸಾಲದು, ಇದರ ಬಗ್ಗೆ ಪ್ರತಿಯೊಬ್ಬರೂ  ಜಾಗರೂಕತೆಯನ್ನು ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಎಸ್.ಮಮದಾಪುರ ಕರೆ ನೀಡಿದ್ದಾರೆ.

ನಗರದ ಟಿ.ಚನ್ನಯ್ಯರಂಗ ಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲ ಕಾರ್ಮಿಕರ ನೇಮಕಾತಿ ನಿರ್ಮೂಲನಾ ಪ್ರಚಾರ ಸಂಘ, ಕಾರ್ಮಿಕ ಇಲಾಖೆ ಹಾಗೂ ವಕೀಲರ ಸಂಘ ಸಂಯುಕ್ತಾ ಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ತಪ್ಪದೆ ಶಿಕ್ಷಣವನ್ನು ಪಡೆದುಕೊಳ್ಳಬೇಕು.ಮಕ್ಕಳನ್ನು ಬಲವಂತವಾಗಿ ದುಡಿಮೆಗೆ ನೂಕಿದರೆ ಅಥವಾ ಬಾಲಕರು ಕಾರ್ಮಿಕರಾಗಿ ದುಡಿಯುವುದು ಕಂಡು ಬಂದರೆ ಕೂಡಲೇ ಬಾಲಕರ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ನೀವು ನೀಡಿದ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನಿಷೇಧ ಕುರಿತು ಪ್ರತಿಯೊಬ್ಬರಿಗೂ ಬಾಲ್ಯ ದಿನಗಳು ಪ್ರತಿನಿತ್ಯ ನೆನಪಾಗುತ್ತಿದೆ.  ಆದರೆ ಕ್ರೌರತೆಯು ಬಾಲ್ಯವನ್ನು ಪಿಡುಗಾಗಿಕಾಡುತ್ತಿದೆ. ಬಾಲಕಾರ್ಮಿಕತೆಯು ಬಾಲ್ಯವನ್ನುಕಿತ್ತುತಿನ್ನುತ್ತಿದ್ದು, ಇದನ್ನು ಪ್ರತಿಯೊಬ್ಬರೂ ವಿರೋಧಿಸಬೇಕು ಎಂದು ತಿಳಿಸಿದರು.

ಶಿಕ್ಷಣ, ಆರೋಗ್ಯ, ಸ್ವಾತಂತ್ರ್ಯ, ಸ್ವೇಚ್ಛಾಚಾರವು ಮಕ್ಕಳ ಹಕ್ಕುಗಳಾಗಿದೆ. ಈ ಹಕ್ಕುಗಳಿಗೆ ಯಾವುದೇ ರೀತಿಯ ತೊಂದರೆಯಾದರೆ 1098 ಗೆ ಕರೆ ಮಾಡಿ ದೂರು ನೀಡಿ, ಯಾವುದೇ ರೀತಿಯ ದೌರ್ಜನ್ಯ, ಶೋಷಣೆಗಳು ನಿಮ್ಮ ಮೇಲೆ ಆದರೆ ಕೂಡಲೇ ಈ ಸಹಾಯವಾಣಿಗೆ ಕರೆ ಮಾಡಿ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಗುರುರಾಜ್ ಜಿ. ಶಿರೋಳ ಮಾತನಾಡಿ, ಬಾಲಕರನ್ನುಅಪಹರಣ ಮಾಡಿ ಬಲವಂತವಾಗಿ ಅವರನ್ನು ಬಾಲಕಾರ್ಮಿಕತೆಗೆ ಮತ್ತು ಬಿಕ್ಷಾಟನೆಗೆ ದೂಡಲಾಗುತ್ತದೆ.  ಪ್ರಪಂಚದಲ್ಲಿ ಇಂದಿಗೂ ಇಂತಹ ಜಾಲಗಳು ಇವೆ.ಶಾಲೆಗೆ ಹೋಗದೆಅಲೆದಾಡುವಂತಹ ಮಕ್ಕಳೇ ಈ ರೀತಿಯಾಗಿ ಅಪಹರಣಗಳಿಗೆ ಹೆಚ್ಚಾಗಿ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ಅಪರಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್‍ ಮಾತನಾಡಿ, ಬಾಲಕಾರ್ಮಿಕತೆ ಸಮಾಜಕ್ಕೆ ಅಂಟಿಕೊಂಡಿರುವ ಒಂದು ಶಾಪ. ಬಡವರ ಹಾಗೂ ಅನಕ್ಷರಸ್ಥರ ಮಕ್ಕಳೇ ಹೆಚ್ಚಾಗಿ ಬಾಲಕಾರ್ಮಿಕತೆಗೆ ಒಳಗಾಗುತ್ತಿರುವವರಾಗಿದ್ದಾರೆ. ಇದರಿಂದ ಮುಕ್ತರಾಗಲು ಶಿಕ್ಷಣ ಪಡೆಯಬೇಕು ಹಾಗೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನಾ ನಗರದ ಗಾಂಧಿವನದಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಕಾರ್ಮಿಕ ಅಧಿಕಾರಿ ಬಿ.ಟಿ.ನಿರಂಜನ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸ್ವಾಮಿ, ಜಿಲ್ಲಾ ವಕೀಲರ ಸಂಘದ ಬಿ.ಆರ್.ಜಯರಾಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸೌಮ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಥುನಾಥರೆಡ್ಡಿ, ಜಿಲ್ಲಾಕಾರ್ಮಿಕ ಯೋಜನಾ ಸಂಘದ ಸದಸ್ಯ ಕೆ.ಆರ್.ಧನರಾಜ್, ಶಾಂತಮ್ಮ, ವಕೀಲರ ಸಂಘದ ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ, ಬಾಲ ಕಾರ್ಮಿಕ ನೇಮಕಾತಿ ನಿರ್ಮೂಲನಾ ಪ್ರಚಾರ ಸಂಘದಯೋಜನಾ ನಿರ್ದೇಶಕ ಎಂ.ಸಿ.ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter