Published On: Mon, Jan 13th, 2020

ತುಂಬೆ: ಶಿಕ್ಷಕ,ರಕ್ಷಕರ ಸಂಘದ ಸಮಾವೇಶ,ಕ್ರೀಡಾಕೂಟ

ಬಂಟ್ವಾಳ: ರಕ್ಷಕ-ಶಿಕ್ಷಕ ಸಭೆ ಅಥವಾ ಸಮಾವೇಶ ಎಂಬುದು ವ್ಯವಸ್ಥೆಯಾಗಿದ್ದು, ಮಕ್ಕಳು ಹುಟ್ಟಿ ಬೆಳೆಯುತ್ತಾ ತಮ್ಮ ಮನೆಯಲ್ಲಿ ಹೆತ್ತವರ ಜೊತೆಗೂಡಿ ಸಂಸ್ಕೃತಿಯನ್ನು ಕಲಿಯುತ್ತಾರೆ.ಬಳಿಕ ಸಮಾಜದಲ್ಲಿ ಇತರರೊಂದಿಗೆ ಸೇರಿ  ಬದುಕಿನ ಜೀವನ ಶಿಕ್ಷಣವನ್ನು ಶಾಲೆ-ಕಾಲೇಜಿನಲ್ಲಿ ಕಲಿಯುತ್ತಾರೆ. ಪೋಷಕರು ತಮ್ಮ ಮಕ್ಕಳ ಕಲಿಕೆ,ನಡತೆಯನ್ನು ಸದಾ ಗಮನಿಸುತ್ತಿರಬೇಕು. ಇಲ್ಲವಾದಲ್ಲಿ ಅವರ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜಗನ್ನಾಥ ಚೌಟ ಹೇಳಿದ್ದಾರೆ.

PTA SPORTS PHOTO

ಅವರು ತುಂಬೆ ಕಾಲೇಜಿನ ಕ್ರೀಡಾಂಗಣದಲ್ಲಿ ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ರಕ್ಷಕ-ಶಿಕ್ಷಕ ಸಮಾವೇಶದಲ್ಲಿ ರಕ್ಷಕ-ಶಿಕ್ಷಕರ ಕ್ರೀಡಾಕೂಟವನ್ನು  ಉದ್ಘಾಟಿಸಿ ಮಾತನಾಡಿದರು. ಡಾ| ಅಮೀರ್‌ ಅಹ್ಮದ್‌ ತುಂಬೆ  ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಮಾತನಾಡಿ, ಶಿಕ್ಷಕ-ರಕ್ಷಕರು ಒಟ್ಟು ಸೇರಿ ಕಾರ್ಯಪ್ರೌವೃತ್ತರಾದಾಗ ಶಿಕ್ಷಣ ಸಂಸ್ಥೆ ಸಾಧನೆಯನ್ನು ಮಾಡುತ್ತದೆ. ತುಂಬೆ ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘವು ಸ್ವತಹ ಆಟೋಟ ಮುಂತಾದ ಕಾರ್ಯಕ್ರಮಗಳನ್ನು ಮಾಡುತ್ತಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತಿರುವುದು ಅಭಿನಂದನಾರ್ಹ ಎಂದರು.  ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.

ಸಮಾವೇಶದ ಕಾರ್ಯಕ್ರಮದಲ್ಲಿ ಎಲ್‌ ಡಿ ಬ್ಯಾಂಕ್ ನಿರ್ದೇಶಕ ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಉಪಾಧ್ಯಕ್ಷ ನಿಸಾರ್‌ಅಹ್ಮದ್, ಎಫ್.ಎ.ಖಾದರ್, ಪುದುಕೊಡ್ಮಾಣ್‌ ಗ್ರಾಮದ ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ವಿ. ಹೆಚ್. ಕರೀಂ, ನಿವೃತ್ತ ಪ್ರಾಧ್ಯಾಪಕ ಫಲೂಲ್, ಪಿ.ಟಿ.ಎ.ಯ ಮಾಜಿ ಅಧ್ಯಕ್ಷರುಗಳಾದ ಗೋಪಾಲಕೃಷ್ಣ ಸುವರ್ಣ, ದೇವದಾಸ್, ನಿಯಾಝ್‌ಎಸ್. ಬಿ.,ಕಾರ್ಯಕಾರಿ ಸಮಿತಿ ಸದಸ್ಯರಾದ ಸುಜಾತ, ಶಾಲಿನಿ, ಸುರೇಶ್ ನೆತ್ತರಕೆರೆ, ಮ್ಯಾಕ್ಷಿಮ್‌ ಕುವೆಲ್ಲೊ, ವಳವೂರು ಇಬ್ರಾಹಿಂ ಮುಂತಾದವರು ಉಪಸ್ಥಿತರಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ತಂಡೆಲ್ ಸ್ವಾಗತಿಸಿ, ಕಛೇರಿ ಅಧೀಕ್ಷಕ ಅಬ್ದುಲ್‌ ಕಬೀರ್ ಬಿ. ಕಾರ್ಯಕ್ರಮ ನಿರೂಪಿಸಿದರು

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter