Published On: Fri, Jan 24th, 2020

ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಬಂಟ್ವಾಳ ವಲಯದ ಮಹಾಸಭೆ

ಬಂಟ್ವಾಳ: ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಬಂಟ್ವಾಳ ವಲಯದ ಸಮ್ಮೇಳನ ಮತ್ತು ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ  ಜರಗಿತು. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರು ಸಮಾರಂಭವನ್ನು ಉದ್ಘಾಟಿಸಿ ಸಂಘದ ಕಟ್ಟಡಕ್ಕೆ ಸ್ಥಳಾವಕಾಶದ ಮನವಿಗೆ ಸ್ಪಂದಿಸುವ ಭರವಸೆ ನೀಡಿದರು.
2001ks6 ph
ಮುಖ್ಯಅತಿಥಿಗಳಾಗಿ ಬಂಟ್ವಾಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಚರಣ್, ಜಿಲ್ಲಾ ಸಂಘದ ಅಧ್ಯಕ್ಷ ಗುಣಪಾಲ್, ಬಂಟ್ವಾಳ ಕಾರ್ಮಿಕ ಅಽಕಾರಿ ಮರ‍್ಲಿನ್ ಗ್ರಾಸಿಯಾ ಡಿಸೋಜಾ ಭಾಗವಹಿಸಿದ್ದರು. ವಲಯದ ಅಧ್ಯಕ್ಷ ವಿಶ್ವನಾಥ ಬಿ. ಅಧ್ಯಕ್ಷತೆ ವಹಿಸಿದ್ದರು.  ಸುಧೀರ್ ಪೂಜಾರಿ ವರದಿ ಮಂಡಿಸಿದರು. ಪ್ರಶಾಂತ್ ಭಂಡಾರ್ ಕಾರ್   ಲೆಕ್ಕಪತ್ರ ಮಂಡಿಸಿದರು.
ತಾಲೂಕಿನ ಆಯ್ದ ೮ ಸರಕಾರಿ ಶಾಲೆಗಳ ೧೬ ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಾಜಿ ಸೈನಿಕ ದಯಾನಂದ, ಗಾಡ್ವಿನ್ ಡಿಮೆಲ್ಲೊ, ಕರಾಟೆಯಲ್ಲಿ ಭವಿಷ್ ಹಾಗೂ ಜಿಲ್ಲಾ ಸಂಘದ ನಿರ್ದೇಶಕ ದಿವಾಕರ್ ಅವರನ್ನು ಸಮ್ಮಾನಿಸಲಾಯಿತು. ಶ್ರೀರಾಮ ವಿದ್ಯಾಕೇಂದ್ರದ ಅನ್ನದಾಸೋಹ ಹಾಗೂ ನಲ್ಕೆಮಾರ್ ಶಾಲೆಯ ಅಭಿವೃದ್ಧಿಗೆ ಧನಸಹಾಯ ನೀಡಲಾಯಿತು.
ಸಿದ್ಧಿಕ್ ಮೆಲ್ಕಾರ್ ಸ್ವಾಗತಿಸಿದರು. ಸುಧಾಕರ್ ಸಾಲ್ಯಾನ್ ಪ್ರಸ್ತಾವನೆಗೈದರು. ಉಮೇಶ್ ಶೆಟ್ಟಿ ವಂದಿಸಿದರು. ಸಂತೋಷ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter