Published On: Thu, Dec 26th, 2019

ಮಣಿಪಾಲದಲ್ಲಿ ಅದ್ದೂರಿ ಯಕ್ಷಗಾನ-ಜಾಂಬವತಿ ಕಲ್ಯಾಣ

ಕಾರ್ಕಳ :  ಜನವರಿ4 ರಂದು ಶನಿವಾರ ಸಂಜೆ 3ಘಂಟೆಗೆ ಸರಿಯಾಗಿ ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ    ರಾಜಾಪುರ ಸಾರಸ್ವತ ಸಂಘ ಮಣಿಪಾಲ ಇವರ ಸಂಪೂರ್ಣ ಸಹಕಾರದಿಂದ ಯಕ್ಷವೈಭವ ಮಕ್ಕಳ ಮೇಳ ಮುಂಬೈ ಮತ್ತು ಎಳ್ಳಾರೆ ಇವರ ವತಿಯಿಂದ ಯಕ್ಷಗಾನ ಜಾಂಬವತಿ ಕಲ್ಯಾಣ ನಡೆಯಲಿದೆ.  ಶಂಕರ್ ನಾಯಕ್ ಎಳ್ಳಾರೆಯವರ ಸಂಯ್ಯೋಜನೆಯಲ್ಲಿ  ನಡೆಯುತ್ತಿರುವ ಈ ಯಕ್ಷಗಾನದ ಹಿಮ್ಮೇಳದ ಭಾಗವತರಾಗಿ ಶಂಕರ್ ಭಟ್ ಬ್ರಹ್ಮೂರು, ಎಳ್ಳಾರೆ ಶಂಕರ್ ನಾಯಕ್, ಮದ್ದಳೆಗಾರರಾಗಿ ಹಂಡ್ರಮನೆ ನರಸಿಂಹಭಟ್, ಚಂಡೆವಾದಕರಾಗಿ ಪ್ರಸನ್ನ ಹೆಗ್ಡೆ ಸಿರ್ಸಿ.

IMG-20191218-WA0022

ಹಾಗೂ ಮುಮ್ಮೇಳದಲ್ಲಿ ಬಾಲಗೋಪಾಲರಾಗಿ ಆಶ್ಲೇಷ್ ಪ್ರಭು,ಛಾಯಾ ನಾಯಕ್.ಪೀಠಿಕೆ ಸ್ತ್ರೀ ವೇಷಧಾರಿಯಾಗಿ ಧನ್ಯಾ ಕಾಮತ್ ಎಳ್ಳಾರೆ,ಚೈತನ್ಯ ಪ್ರಭು ಎಳ್ಳಾರೆ,ಜಾಂಬವನಾಗಿ ರಘುನಾಥ್ ನಾಯಕ್ ಎಣ್ಣೆಹೊಳೆ .ಬಲರಾಮ. ಶ್ರೀ ಅಶೋಕ್ ಶೆಟ್ಟಿ ಕೊಡ್ಲಾಡಿ. ಸತ್ರಾಜಿತ.. ದಯಾನಂದ ನಾಯಕ್ ಮರ್ಣೆ.  ,1ಕೃಷ್ಣ ಅನುಜಿತ್ ನಾಯಕ್ ಎಳ್ಳಾರೆ, 2ಕೃಷ್ಣ ಪೂರ್ಣನಂದ ನಾಯಕ್ ಎಳ್ಳಾರೆ, ನಾರದನಾಗಿ ಮನೋಹರ್ ನಾಯಕ್, ಜಾಂಬವತಿ:ಸಂದ್ಯಾ ನಾಯಕ್, ಪ್ರಸೇನನಾಗಿ ಚೈತನ್ಯ ಪ್ರಭು ಎಳ್ಳಾರೆ ರಂಗವನ್ನು ರಂಜಿಸಲಿದ್ದಾರೆ ಇನ್ನುಳಿದ ಕಲಾವಿದರನ್ನು ರಂಗಸ್ಥಳ ದಲ್ಲಿ ನಿರೀಕ್ಷಿಸಿರಿ  ಯಕ್ಷಗಾನ ಕಾರ್ಯಕ್ರಮದ ಮದ್ಯಂತರದಲ್ಲಿ ಆರ್ ಎಸ್ ಬಿ ಸಭಾಭವನ ದ ಅಧ್ಯಕ್ಷರು ಶ್ರೀ ಗೋಕುಲ್ ದಾಸ್ ನಾಯಕ್ ರವರ  ಅಧ್ಯಕ್ಷತೆಯಲ್ಲಿ ಹಾಗೂ ಅತಿಥಿ ಗಣ್ಯರ ಸಮ್ಮುಖದಲ್ಲಿ  ಕಲಾವಿದ ಹಿರಿಯಡ್ಕ ಮನೋಹರ್ ನಾಯಕ್ ಹಾಗೂ ಯಕ್ಷಗಾನದ ಪ್ರೋತ್ಸಾಹಕರಾದ ಕಾಸರಗೋಡು ಸದಾಶಿವ ಭಟ್ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter